Saturday, June 28, 2025
spot_imgspot_img
spot_imgspot_img

ಭೀಕರ ಅಪಘಾತ-ದಂಪತಿಗಳ ಸಾವು.

- Advertisement -
- Advertisement -

ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಭೀಕರ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ದಂಪತಿಗಳು ಸಾವನ್ನಪ್ಪಿದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ.

ಭಾರಿ ಗಾತ್ರದ ಟ್ರಕ್ ಬೈಕ್ ಮೇಲೆ ಹರಿದು ಬೈಕ್ ನಲ್ಲಿದ್ದ ಪ್ರಿಯಾ ಪೆರ್ನಾಂಡಿಸ್ (25) ಸ್ಥಳದಲ್ಲೇ ಸಾವನ್ನಪ್ಪಿದರೆ,ಬೈಕ್ ಸವಾರ ಪತಿ ರಾಯನ್ ಪೆರ್ನಾಂಡಿಸ್(34)ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದರು.

ಮಂಗಳೂರು ಬಜಾಲ್ ಮೂಲದ ರಾಯನ್ ಪೆರ್ನಾಂಡಿಸ್.ಕಳೆದ ಹತ್ತು ದಿನಗಳಿಂದ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ರಾಯನ್,ಪ್ರಿಯಾ ದಂಪತಿಗಳಿಬ್ಬರೂ ಕಂಕನಾಡಿ ಫಾದರ್ ಮುಲ್ಸರ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!