Friday, June 26, 2026
spot_imgspot_img
spot_imgspot_img

ಮಂಗಳೂರು: ತೀವ್ರ ಅಸ್ವಸ್ಥಗೊಂಡಿದ್ದ ಲೈಬಿರಿಯಾ ಹಡಗಿನ ಸಿಬ್ಬಂದಿಯನ್ನು ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್

- Advertisement -
- Advertisement -

ಮಂಗಳೂರು: ಮಂಗಳೂರು ಬಂದರಿನಿಂದ 9.5 ನಾಟಿಕಲ್ ಮೈಲ್ ದೂರದಲ್ಲಿ ನಿಂತಿದ್ದ ಲೈಬಿರಿಯಾ ಮೂಲದ ಹಡಗಿನ ಸಿಬ್ಬಂದಿಯೊಬ್ಬರು ತೀವ್ರ ಅನಾರೋಗ್ಯಕ್ಕಿಡಾಗಿದ್ದು ಅವರನ್ನು ಕೋಸ್ಟ್ ಗಾರ್ಡ್ ಶಿಫ್ ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸಿದೆ.

ನವಮಂಗಳೂರು ಬಂದರಿನಿಂದ ಸುಮಾರು 9.5 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದ್ದ ಲೈಬಿರಿಯಾದ ಹಡಗಿನ ಸಿಬ್ಬಂದಿಯೊಬ್ಬರಿಗೆ ತೀವ್ರ ಅನಾರೋಗ್ಯವಾಗಿತ್ತು. ಕೂಡಲೇ ಕರ್ನಾಟಕದ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ರಕ್ಷಣೆ ಕೋರಿ ಮಧ್ಯರಾತ್ರಿ ಕರೆ ಬಂದಿತ್ತು ಇನ್ನು ತುರ್ತಾಗಿ ಸ್ಪಂದಿಸಿದ ಕೋಸ್ಟ್ ಗಾರ್ಡ್ ಶಿಫ್ ಸಿ-448 ಹಡಗಿನ ಸಿಬ್ಬಂದಿ ತಡರಾತ್ರಿ ಬೋಟಿನಲ್ಲಿ ವೈದ್ಯರೊಂದಿಗೆ ಹಡಗಿನ ಬಳಿ ತೆರಳಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 52 ವರ್ಷ ಪ್ರಾಯದ ಸಿಬ್ಬಂದಿಗೆ ತುರ್ತು ಚಿಕಿತ್ಸೆ ನೀಡಿ ರಕ್ಷಣೆ ಮಾಡಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದೆ. ಹಡಗಿನ ಸಿಬ್ಬಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ.

- Advertisement -

Related news

error: Content is protected !!