Sunday, June 29, 2025
spot_imgspot_img
spot_imgspot_img

ನಟ ಉಪೇಂದ್ರ ಅವರಿಗೆ ‘ಕಬ್ಜ’ ಶೂಟಿಂಗ್ ವೇಳೆ ತಲೆಗೆ ಕಬ್ಬಿಣದ ರಾಡ್ ತಗುಲಿ ಗಾಯ!

- Advertisement -
- Advertisement -

ಬೆಂಗಳೂರು: ನಟ ಉಪೇಂದ್ರ ಅವರಿಗೆ ಕಬ್ಜ ಶೂಟಿಂಗ್ ವೇಳೆಯ ಸ್ಟಂಟ್ ಸಂದರ್ಭದಲ್ಲಿ, ಕಬ್ಬಿಣದ ರಾಡ್ ತಗುಲಿ, ತಲೆಗೆ ಪೆಟ್ಟಾಗಿರುವಂತ ಘಟನೆ ನಡೆದಿದೆ. ಇಂದು ಬೆಂಗಳೂರಿನ ಮಿನರ್ವ ಮಿಲ್‌ ಬಳಿ ಸಿನಿಮಾದ ಸಾಹಸದ ಚಿತ್ರೀಕರಣ ನಡೆಯುತಿತ್ತು. ಈ ಸಂದರ್ಭದಲ್ಲಿ ನಟ ಉಪೇಂದ್ರ ಅವರಿಗೆ ರಾಡ್ ನಿಂದ ಹೊಡೆಯುವ ದೃಶ್ಯಾವಳಿ ಚಿತ್ರೀಕರಣ ಸಂದರ್ಭದಲ್ಲಿ, ರಾಡ್ ತಪ್ಪಿಸಿಕೊಳ್ಳೋದು ಮಿಸ್ ಆಗಿ, ಅವರ ತಲೆಗೆ ಬಿದ್ದಿದೆ.

ಇದರಿಂದಾಗಿ ಕೆಲ ಕಾಲ ಪೆಟ್ಟು ತಿಂದು ನೋವುಗೊಂಡ ನಟ ಉಪೇಂದ್ರ, ನಂತ್ರ ಅಷ್ಟೇನು ನೋವಾಗಿಲ್ಲ. ಪರವಾಗಿಲ್ಲ ಎನ್ನುವ ಮೂಲಕ, ಮತ್ತೆ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಕಬ್ಜ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!