Saturday, April 27, 2024
spot_imgspot_img
spot_imgspot_img

ನಟ ಚೇತನ್ ರೈ ಮಾಣಿ ಇವರಿಗೆ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

- Advertisement -G L Acharya panikkar
- Advertisement -

ಬಂಟ್ವಾಳ (ನ.2): ರಂಗಕಲಾವಿದ, ತುಳು ಚಲನಚಿತ್ರ ನಟ ಚೇತನ್ ರೈ ಮಾಣಿ ಇವರಿಗೆ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪುತ್ತೂರು ಬೆಳ್ಳಿಪಾಡಿ ಮನೆತನದ ಸರ್ವತ್ತೋಡಿ ಸಂಕಪ್ಪ ರೈ ಹಾಗೂ ಕುದ್ರೆಪ್ಪಾಡಿ ಮನೆತನದ ದಿವಂಗತ ಭಾರ್ಗವಿ ರೈ ದಂಪತಿಯ ಜೇಷ್ಠ ಪುತ್ರ ಚೇತನ್ ರೈಯವರು ಅಭಿನಯಿಸಿದ ನಾಟಕಗಳ ಸಂಖ್ಯೆ ಎಂಟು ಶತಕಗಳ ಗಡಿ ದಾಟಿದೆ.ಪ್ರದರ್ಶನಗಳ ಸಂಖ್ಯೆ ಆರು ಸಹಸ್ರವನ್ನು ಮೀರಿದೆ. ನಿರ್ದೇಶಿಸಿದ ನಾಟಕಗಳ ಸಂಖ್ಯೆ ನೂರೈವತ್ತಕ್ಕಿಂತಲೂ ಅಧಿಕ. ಮೂರನೆ ತರಗತಿಯಲ್ಲಿರುವಾಗ ಉಪ್ಪಳ ಕೃಷ್ಣ ಮಾಸ್ತರ್ ಅವರಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತು ಕಂಸನ ಪಾತ್ರ ನಿರ್ವಹಿಸಿದವರು. ಚೇತನ್ ರೈ ಅವರ ದೊಡ್ಡಪ್ಪ ರಾಮಣ್ಣ ರೈ ಪುತ್ತೂರು ನಾಟಕದ ಪ್ರೌಢ ಕಲಾವಿದರಾಗಿದ್ದವರು. ಅವರ ಪ್ರೇರಣೆಯಿಂದ ನಾಟಕಗಳಲ್ಲಿ ಅಭಿನಯಿಸ ತೊಡಗಿದರು.

ನಾಟಕದ ಖ್ಯಾತಿ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಕನ್ನಡ ತುಳು ಎರಡೂ ಭಾಷೆಯ ಬೆಳ್ಳಿ ಪರದೆ ಹಾಗೂ ಕಿರುತೆರೆಗಳಲ್ಲೂ ವಿಶಿಷ್ಟವಾದ ಪಾತ್ರಗಳು ರೈ ಅವರನ್ನು ಹುಡುಕಿಕೊಂಡು ಬಂದವು. ಕೋಟಿ ಚೆನ್ನಯ -2 ಒರಿಯಡ್ದ್ ಒರಿ ಅಸಲ್, ಚಂಡಿ ಕೋರಿಲು, ಒರಿಯನ್ ತೂಂಡ ಒರಿಯಾಗಾಪುಜಿ, ಅರೆ ಮರ್ಲೆರ್, ಬರ್ಸ, ಚಾಲಿಪೋಲಿಲು, ಮದಿಮೆ, ಏರಾ ಉಲ್ಲೇರ್, ಮದಿಪು, ದೇವೆರ್, ದೇಯಿ ಬೈದೆದಿ, ಪತ್ತನಾಜೆ, ಜಬರ್ದಸ್ತ್ ಶಂಕರ್, ಮೈ ನೇಮ್ ಈಸ್ ಅಣ್ಣಪ್ಪೆ, ಉಮಿಲ್, ಐಸ್ ಕ್ರೀಂ ಮೊದಲಾದ ಹದಿನೇಳು ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ರಂಗಭೂಮಿ ಹಾಗೂ ತುಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಸಿರುವಂತಹ ಕಲಾವಿದ ಚೇತನ್ ರೈ ಮಾಣಿ ಇವರಿಗೆ ೨೦೨೦ ರ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯೋತ್ಸವದಂದು ನೀಡಲಾಯಿತು.

- Advertisement -

Related news

error: Content is protected !!