Sunday, June 14, 2026
spot_imgspot_img
spot_imgspot_img

ನಟ ದರ್ಶನ್‌ಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ- ವಿಚಾರಣೆ ನಾಳೆಗೆ ಮುಂದೂಡಿಕೆ

- Advertisement -
- Advertisement -

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಕೂಡ ಜಾಮೀನು ಸಿಕ್ಕಿಲ್ಲ.. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರ ಅಂದರೆ ನಾಳೆಗೆ ಮುಂದೂಡಿದೆ.

57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆಯಿತು. ಆಕ್ಷೇಪಣಾ ವಾದವನ್ನು ಎಸ್‌ಪಿಪಿ ಪ್ರಸನ್ನಕುಮಾರ್ ಮಂಡಿಸಿದರು. ಪವಿತ್ರಗೌಡ, ದರ್ಶನ್ ಮತ್ತು ರವಿಶಂಕರ್ ಪಾತ್ರದ ಬಗ್ಗೆ ವಾದ ಮಂಡನೆ ಮಾಡಿದರು.

ಬಳ್ಳಾರಿ ಜೈಲಿನಲ್ಲಿ ದರ್ಶನ್​ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹಾಗಿದ್ದರೂ ಕೂಡ ಅವರು ಚಿಕಿತ್ಸೆ ಪಡೆದಿಲ್ಲ. ದರ್ಶನ್​ ಮೊಂಡುತನದಿಂದ ಅಧಿಕಾರಿಗಳಿಗೆ ಸಮಸ್ಯೆ ಆಗಿದೆ. ಹಾಗಾಗಿ ದರ್ಶನ್ ಅನಾರೋಗ್ಯ ಮತ್ತು ಚಿಕಿತ್ಸೆ ಬಗ್ಗೆ ಸಮಗ್ರ ವರದಿಯನ್ನು ವಿಮ್ಸ್​ ವೈದ್ಯರಿಂದ ಜೈಲಾಧಿಕಾರಿಗಳು ಕೇಳಿದ್ದಾರೆ. ಜಾಮೀನು ಪಡೆಯಲು ದರ್ಶನ್​ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಜಾಮೀನು ಸಿಕ್ಕರೆ ಬೆಂಗಳೂರಿಗೆ ಬಂದು ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ದರ್ಶನ್​ ತೀರ್ಮಾನಿಸಿದ್ದಾರೆ.

- Advertisement -

Related news

error: Content is protected !!