Sunday, January 26, 2025
spot_imgspot_img
spot_imgspot_img

ನಟನೆಗೆ ನಿವೃತ್ತಿ ಘೋಷಿಸಿದ ನಟ ವಿಕ್ರಾಂತ್ ಮಾಸ್ಸಿ

- Advertisement -
- Advertisement -

ಮುಂಬೈ: ಹಲವು ಸಿನಿಮಾಗಳಲ್ಲಿ ನಟಿಸಿ ಅದ್ಭುತ ನಟ ಎಂದೆನಿಸಿಕೊಂಡಿರುವ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ ಅವರು ನಟನೆಗೆ ಗುಡ್‌ಬೈ ಹೇಳಿದ್ದು, ಅವರ ಈ ನಿರ್ಧಾರಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಳೆದ ಕೆಲ ವರ್ಷಗಳು ಉತ್ತಮವಾಗಿತ್ತು. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದೆ ಬಂದಂತೆಲ್ಲ ಮಗನಾಗಿ, ಗಂಡನಾಗಿ, ತಂದೆಯಾಗಿ ಮನೆಗೆ ಹಿಂತಿರುಗಲು ಇದು ಸರಿಯಾದ ಸಮಯ ಎಂದು ನಾನು ಅರಿತುಕೊಂಡೆ’ ಎಂದು ಬರೆದುಕೊಂಡಿದ್ದಾರೆ.

‘2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗೋಣ. ಮುಂದೆ 2 ಸಿನಿಮಾಗಳು ಮಾತ್ರ ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ನಾನು ನಿಮಗೆ ಎಂದೆಂದಿಗೂ ಋಣಿ’ ಎಂದು ಪೋಸ್ಟ್ ಮಾಡಿದ್ದಾರೆ.

ನಟ ವಿಕ್ರಾಂತ್ ಮಾಸ್ಸಿ ಅವರ ಈ ನಿರ್ಧಾರ ಅನೇಕರಿಗೆ ಶಾಕ್ ನೀಡಿದೆ. ಕೇವಲ 37ನೇ ವರ್ಷಕ್ಕೆ ನಟನೆಗೆ ಗುಡ್‌ಬೈ ಹೇಳಿರುವ ಅವರ ನಿರ್ಧಾರದ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಇನ್ನು ನಟನ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕೆಲವರು ‘ನೀವು ನನ್ನ ಇಷ್ಟದ ನಾಯಕ’ ಎಂದು ಹೇಳಿದ್ದಾರೆ. ‘ನೀವು ಮರಳಿ ಬರಲಿ ಎಂದು ಕಾಯುತ್ತೇವೆ’ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು ‘ನೀವು ಭಾರತದ ಅದ್ಭುತ ನಟ. ದಯವಿಟ್ಟು ಹೋಗಬೇಡಿ’ ಎಂದು ಕೇಳಿಕೊಂಡಿದ್ದಾರೆ.

2013 ರಲ್ಲಿ ‘ಲೂಟೆರಾ’ ಸಿನಿಮಾ ಮೂಲಕ ವಿಕ್ರಾಂತ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 2023ರಲ್ಲಿ ಬಿಡುಗಡೆಯಾದ ’12th ಫೇಲ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ‘ಮಿರ್ಜಾಪುರ್’ ಸರಣಿಯಲ್ಲಿ ಅವರು ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಇನ್ನು ಈ ವರ್ಷ ‘ದಿ ಸಾಬ್ರಮತಿ ರಿಪೋರ್ಟ್’ ಚಿತ್ರದಲ್ಲಿ ನಟಿಸಿದ್ದು, ಇದಕ್ಕಾಗಿ ಅವರು ಬೆದರಿಕೆ ಕೂಡ ಎದುರಿಸಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!