Tuesday, November 28, 2023
spot_imgspot_img
spot_imgspot_img

ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್​ಗೆ ಪೊಲೀಸ್ ದಾಳಿ – ವಿದ್ಯಾರ್ಥಿಗಳು ವಶಕ್ಕೆ

- Advertisement -G L Acharya panikkar
- Advertisement -

ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್​ಗೆ ಪೊಲೀಸ್ ದಾಳಿ ಮಾಡಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಘಟನೆ ಉಡುಪಿ ತಾಲೂಕಿನ‌ ಮಣಿಪಾಲ ಸಮೀಪದ ವಿದ್ಯಾನಗರದಲ್ಲಿ ನಡೆದಿದೆ.

ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬಾರ್​ಗೆ ದಾಳಿ ಮಾಡಿದ ಮಣಿಪಾಲ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಬಾರ್‌ವೊಂದರಲ್ಲಿ ಅನುಮತಿ ಇಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿಗಳು ಪಾರ್ಟಿ ಮಾಡಿದ ಹಾಗೂ ಹುಕ್ಕಾ, ಮದ್ಯ ಸೇವನೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು. ವೀಕೆಂಡ್ ಬಂದೋಬಸ್ತ್ ನಲ್ಲಿದ್ದ ಪೊಲೀಸರು ವಿಷಯ ತಿಳಿಯುತ್ತಿದ್ದಂತೆ ಮಿಂಚಿನ ಕಾರ್ಯಾಚರಣೆ ನಡೆಸಿ ಬಾರ್​ ಮೇಲೆ ದಾಳಿ ನಡೆಸಿದ್ದಾರೆ.

ಇನ್ನು ಮಣಿಪಾಲ ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಉಡುಪಿ ತಾಲೂಕಿನ‌ ಮಣಿಪಾಲ ಸಮೀಪದ ವಿದ್ಯಾನಗರದಲ್ಲಿರುವ ಎಸ್​ ಸ್ಟೇಸಿ ಬಾರ್​ ಮೇಲೆ ದಾಳಿ ನಡೆಸಿದೆ. ಈ ವೇಳೆ ಅನುಮತಿ ಇಲ್ಲದೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಬಾರ್​ನಲ್ಲಿ ಡಿಜೆ ಪಾರ್ಟಿ ಮಾಡಲು ಅನುಮತಿ ನೀಡಿದ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!