Monday, June 24, 2024
spot_imgspot_img
spot_imgspot_img

ಯುವ ರಾಜ್​ಕುಮಾರ್‌ ಪತ್ನಿ ವಿರುದ್ದ ಕಾನೂನು ಸಮರಕ್ಕೆ ಮುಂದಾದ ನಟಿ ಸಪ್ತಮಿ ಗೌಡ

- Advertisement -G L Acharya panikkar
- Advertisement -

ದೊಡ್ಮನೆಯಲ್ಲಿ ಡಿವೋರ್ಸ್​ ಗಾಳಿ ಬಿರುಗಾಳಿಯಂತೆ ಎಲ್ಲೆಡೆ ಹಬ್ಬಿತ್ತು. ಯುವ ಹಾಗೂ ಶ್ರೀದೇವಿ ಬಾಳಲ್ಲಿ ಉಂಟಾದ ಬಿರುಕಿಗೆ ಅಕ್ರಮ ಸಂಬಂಧದ ಬಣ್ಣ ಬಳಿಯಲಾಗಿತ್ತು. ಇದೀಗ ತನ್ನ ವಿರುದ್ಧದ ಆರೋಪಕ್ಕೆ ನಟಿ ಸಪ್ತಮಿ ಗೌಡ ರೊಚ್ಚಿಗೆದ್ದಿದ್ದಾರೆ. ಯುವ ಪತ್ನಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಯುವ ರಾಜ್​ಕುಮಾರ್ ತನ್ನ ಪತ್ನಿ ವಿರುದ್ಧ​ ಲೀಗಲ್​ ನೋಟಿಸ್​ ಕೊಟ್ಟಿದ್ದಕ್ಕೆ ಪತ್ನಿ ಶ್ರೀದೇವಿ ಬೈರಪ್ಪ ರಿಪ್ಲೈ ನೋಟೀಸ್​ ನೀಡಿದ್ದರು.ಈ ನೋಟಿಸ್​ನಲ್ಲಿ ನಟಿ ಸಪ್ತಮಿ ಗೌಡ ಅವ್ರ ಬಗೆಗಿನ ಸಂಬಂಧದ ಬಗ್ಗೆ ಉಲ್ಲೇಖವೂ ಆಗಿತ್ತು.

ಇದೀಗ ಈ ಎಲ್ಲಾ ಆರೋಪಗಳಿಗೂ ಖುದ್ದು, ನಟಿ ಸಪ್ತಮಿ ಗೌಡ ಕಾನೂನಿನ ಚಾಟಿ ಬೀಸಿದ್ದಾರೆ. ಹೌದು, ಯುವ ಪತ್ನಿ ಶ್ರೀದೇವಿ ಮಾಡಿದ್ದ ಆರೋಪಕ್ಕೆ ನಟಿ ಸಪ್ತಮಿ ಗೌಡ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ವಿರುದ್ಧ ಅಪಪ್ರಚಾರ ಮಾಡದಂತೆ ಸಿಟಿ ಸಿವಿಲ್ ಕೋರ್ಟ್​ ಮೊರೆ ಹೋಗಿದ್ದು, ಸಪ್ತಮಿ ಗೌಡ ಪರ ಇಂದು ಕೋರ್ಟ್‌ನಲ್ಲಿ ಹಿರಿಯ ವಕೀಲ ಶಂಕರಪ್ಪ ವೆಂಕಟರಾಯಪ್ಪ ಅವರು ಈ ಸಂಬಂಧ​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -

Related news

error: Content is protected !!