

ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಡಿವೋರ್ಸ್ ನೋಟೀಸ್‌ನಲ್ಲಿ ಪತ್ನಿ ಶ್ರೀದೇವಿ ಭೈರಪ್ಪರವರು ಪದೇ ಪದೇ ತನ್ನ ಪತಿ ಯುವ ರಾಜ್‌ಕುಮಾರ್ ಹಾಗೂ ನಟಿ ಸಪ್ತಮಿ ಗೌಡ ನಡುವಿನ ಅಫೇರ್ ಬಗ್ಗೆ ಬೆರಳು ಮಾಡಿ ತೋರಿಸಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ಸಪ್ತಮಿ ಗೌಡ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಟಿ ಸಪ್ತಮಿ ಗೌಡ ಎನ್ನಲಾದ ವೈರಲ್ ಆಡಿಯೋದಲ್ಲಿ ‘’ಹಾಯ್ ಸರ್.. ಇವಾಗ ನಿಮಗಾಗಲೇ ವಿಷಯ ಗೊತ್ತಾಗಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿ ಹೇಳೋಕೆ ನಾನಗೊಂದು ಚಾನ್ಸ್ ಕೊಡಿ. ನಾನು ತಪ್ಪು ಮಾಡಿಲ್ಲ ಅಂತ ಹೇಳ್ತಾ ಇಲ್ಲ. ಖಂಡಿತವಾಗಿಯೂ ನನ್ನಿಂದ ತಪ್ಪಾಗಿದೆ. ಇಲ್ಲ ಅಂತ ಹೇಳ್ತಿಲ್ಲ. ನಾನು ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ, ಬಾಬಾ ಮೇಲೆ ಆಣೆ ಮಾಡಿ ಹೇಳ್ತೀನಿ.. ಯಾವತ್ತೂ ನಾನು ಗುರುಗೆ (ಯುವ ರಾಜ್‌ಕುಮಾರ್) ನಿನ್ನ ಮದುವೆ ಬಿಟ್ಟುಬಿಟ್ಟು ನನ್ನ ಜೊತೆ ಬಾ ಅಂತ ಹೇಳಿಲ್ಲ. ಬೇಕಾದರೆ ನೀವು ಅವನನ್ನೂ ಕೇಳಬಹುದು’’ ‘’ಇದನ್ನ ವರ್ಕೌಟ್ ಮಾಡು, ಇದು ತಪ್ಪಾಗುತ್ತೆ, ಬೇಡ ಅಂತ ನಾನು ತುಂಬಾ ಸಲಿ ಹೇಳಿದ್ದೀನಿ ಸರ್. ಹೌದು, ಇದು ನಿಮ್ಮ ಸೆಟ್‌ನಲ್ಲಿ ಆಗಿದ್ದು. ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್. ಪರ್ವಾಗಿಲ್ಲ. ನನ್ನ ಮನೆಯಲ್ಲೂ ನಾನು ಪ್ರಾಮಿಸ್ ಮಾಡಿದ್ದೇನೆ ನಾನು ಮಾತಾಡಲ್ಲ ಅಂತ’. ‘’ನೀವು ಬೈಯ್ಯುತ್ತೀರೋ.. ಏನೋ.. ಅದನ್ನ ನಾನು ಸ್ವೀಕರಿಸುತ್ತೇನೆ. ಸಪ್ತಮಿ ಇಷ್ಟು ಕೆಟ್ಟವಳಾಗೋಕೆ ಸಾಧ್ಯನಾ ಅಂತ ಯಾವತ್ತಾದರೂ ಒಂದು ಸಲಿ ಅನಿಸಿದ್ದರೆ ನನಗೆ ಒಂದು ಚಾನ್ಸ್ ಬೇಕು. ನನ್ನ ಸೈಡ್ ಆಫ್ ದಿ ಸ್ಟೋರಿಯನ್ನ ನಾನು ಹೇಳೋಕೆ ಅಷ್ಟೇನೇ. ನೀವು ಓಕೆ ಅಂದ್ರೆ ಹೇಳಿ ಸರ್. ನಾನು ಬಂದು ಮಾತಾಡುತ್ತೇನೆ. ಹೌದು ಸರ್. ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ. ಎಲ್ಲಾ ಆಗಿದೆ. ಎಲ್ಲವನ್ನೂ ನಾನು ಒಪ್ಪಿಕೊಳ್ತೀನಿ. ತಪ್ಪೇ ನಂದು. ಇಲ್ಲ ಅಂತ ಹೇಳ್ತಾ ಇಲ್ಲ. ಆದರೆ, ನಿಜವಾಗಿಯೂ ನಾನು ಇದನ್ನ ನಂಬಿ ಮಾಡಿದ್ದು. ಗುರು (ಯುವ ರಾಜ್‌ಕುಮಾರ್) ನನ್ನ ಹತ್ತಿರ ಬಂದು ಅಷ್ಟು ಹೇಳಿಕೊಂಡ ಮೇಲೆ ನಾನು ಅವನನ್ನ ನಂಬಿ ಮಾಡಿದ್ದು. ಇಲ್ಲಾಂದ್ರೆ ನಾನು… ಸಾರಿ ಸರ್. ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಸರ್’’ ಎಂದು ಅಳುತ್ತಾ ಮಾತನಾಡಿದ್ದಾರೆ.