Tuesday, May 7, 2024
spot_imgspot_img
spot_imgspot_img

“ಜೀವನದಲ್ಲಿ 99 ಸಮಸ್ಯೆಗಳಿವೆ ಮತ್ತು ಅವುಗಳಲ್ಲಿ ಒಂದು ಗಂಡನಲ್ಲ”-ಡಿವೋರ್ಸ್ ಸೆಲೆಬ್ರೇಟ್ ಮಾಡಿ ಫೋಟೋಶೂಟ್‌ ಮಾಡಿಸಿದ ನಟಿ ಶಾಲಿನಿ

- Advertisement -G L Acharya panikkar
- Advertisement -

ತಮಿಳಿನ ಖ್ಯಾತ ಕಿರುತೆರೆ ನಟಿ ಶಾಲಿನಿ ಡಿವೋರ್ಸ್ ಫೋಟೋಶೂಟ್ ಕಾರಣದಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಡಿವೋರ್ಸ್ ಸಿಕ್ಕ ಖುಷಿಯನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪತಿಯೊಂದಿಗಿನ ಫೋಟೋಗಳನ್ನು ಹರಿದು ಹಾಕಿದ ನಟಿ ಕಾಲಿನಿಂದ ಫೋಟೋವನ್ನು ತುಳಿದು ಹಾಕಿದ್ದಾರೆ.

ತಮಿಳು ಸೀರಿಯಲ್ ನಟಿ ಶಾಲಿನಿ ತನ್ನ ಪತಿಯಿಂದ ವಿಚ್ಛೇದನ ಪಡೆದ ನಂತರ ವಿಚ್ಛೇದನದ ಫೋಟೋಶೂಟ್ ಮಾಡಿಸಿದ್ದಾರೆ. ‘ಜೀವನದಲ್ಲಿ 99 ಸಮಸ್ಯೆಗಳಿವೆ ಮತ್ತು ಅವುಗಳಲ್ಲಿ ಒಂದು ಗಂಡನಲ್ಲ’ ಎಂದು ಶಾಲಿನಿ ಒಂದಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ತಮಿಳು ಧಾರಾವಾಹಿ ‘ಮುಳ್ಳುಂ ಮಲರುಂ’ ಮೂಲಕ ಗಮನ ಸೆಳೆದ ನಟಿ ಶಾಲಿನಿ. ಮೂರು ವರ್ಷಗಳ ಹಿಂದೆಯಷ್ಟೇ ರಿಯಾಜ್ ಎನ್ನುವವರ ಜೊತೆ ಮದುವೆಯಾಗಿದ್ದರು. ತಮಗೆ ಗಂಡನಿಂದ ದೈಹಿಕ ಕಿರುಕುಳ ಆಗುತ್ತಿದೆ ಎಂದು ಆರೋಪ ಮಾಡಿದ್ದರು. ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಹಲವು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದರು.

ಶಾಲಿನಿ ಮತ್ತು ರಿಯಾಜ್ ದಂಪತಿಗೆ ಒಂದು ಮಗು ಕೂಡ ಇದೆ. 2020 ಜೂನ್ ಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಕೇವಲ ಎರಡೂವರೆ ವರ್ಷದಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇದೀಗ ಶಾಲಿನಿ ರಿಯಾಜ್ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದು ,ಆ ಸಂಭ್ರಮವನ್ನು ಫೋಟೋಶೂಟ್ ಮೂಲಕ ವ್ಯಕ್ತ ಪಡಿಸಿದ್ದರು. ಆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ನಟಿ ಶಾಲಿನಿಗೆ ಒಬ್ಬ ಮಗಳಿದ್ದಾಳೆ. ಡಿವೋರ್ಸ್ ಬಳಿಕ ಮಗಳ ಸಂಪೂರ್ಣ ಹೊಣೆ ಶಾಲಿನಿ ಮೇಲಿದೆ.

ಈ ಫೋಟೋಗಳನ್ನು ನಟಿ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಟ್ಟ ದಾಂಪತ್ಯ ಮುರಿಯುವುದರಲ್ಲಿ ತಪ್ಪೇನಿಲ್ಲ. ನಿಮ್ಮ ಜೀವನದಲ್ಲಿ ನೀವು ಸಂತೋಷವಾಗಿರಲು ಏನು ಬೇಕು ಅದನ್ನು ಮಾಡಿ. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಉತ್ತಮ ನಿರ್ಧಾರ ಬದಲಾವಣೆ ಅಗತ್ಯ ಎಂದಿದ್ದಾರೆ. ವಿಚ್ಛೇದನ ವಿಫಲವಲ್ಲ! ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಇದು ಒಂದು ಮಹತ್ವದ ತಿರುವು. ನಿಮ್ಮ ಮದುವೆಯನ್ನು ಬಿಟ್ಟು ಏಕಾಂಗಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು ಎಂದು ಶಾಲಿನಿ ಬರೆದಿದ್ದಾರೆ.

ನಾನು ಇದನ್ನು ಎಲ್ಲಾ ಧೈರ್ಯಶಾಲಿಗಳಿಗೆ ಅರ್ಪಿಸುತ್ತೇನೆ ಎಂದು ಶಾಲಿನಿ ಅವರ ಪ್ರೊಫೈಲ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ಶಾಲಿನಿ ಪೋಸ್ಟ್‌ಗಳಿಗೆ ಸಾಕಷ್ಟು ಕಮೆಂಟ್​ ಮತ್ತು ಸಾವಿರಾರು ಲೈಕ್‌ಗಳು ಹರಿದು ಬಂದಿದೆ. ವಿಚ್ಛೇದನದ ಎದುರು ಧೈರ್ಯವಾಗಿ ನಿಂತ ಶಾಲಿನಿಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಂಡನ ಫೋಟೋ ತುಳಿದಿದ್ದಕ್ಕೆ ನೆಗೆಟಿವ್ ಕಮೆಂಟ್ ಕೂಡ ಬಂದಿದೆ.

- Advertisement -

Related news

error: Content is protected !!