- Advertisement -
- Advertisement -
ಉಡುಪಿ: ಪತಿಯ ಕಿರುಕುಳದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಬಾಗಲಕೋಟೆ ಜಿಲ್ಲೆಯ ಕಮಾಲಾಕ್ಷಿ (34) ಎಂದು ಗುರುತಿಸಲಾಗಿದೆ.
ಇವರು 12 ವರ್ಷಗಳ ಹಿಂದೆ ರಾಜು ಎಂಬವರನ್ನು ವಿವಾಹವಾಗಿದ್ದು, ಅವರು ಕಳೆದ 7-8 ವರ್ಷಗಳಿಂದ ಬೈಲೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ ವಾಸಮಾಡಿಕೊಂಡಿದ್ದರು.
ರಾಜು ಮದ್ಯಪಾನ ಮಾಡಿ ಹೆಂಡತಿಗೆ ಕಿರುಕುಳ ನೀಡುತ್ತಿದ್ದು ಇದೇ ಚಿಂತೆಯಲ್ಲಿ ಮನನೊಂದ ಕಮಾಲಾಕ್ಷಿ ಜು.26ರಂದು ಮಧ್ಯಾಹ್ನ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ದೂರಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಆಕೆ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜು.28ರಂದು ಮೃತಪಟ್ಟರು ಎಂದು ತಿಳಿದುಬಂದಿದೆ. ಕಮಾಲಾಕ್ಷಿಯ ಸಾವಿಗೆ ಆಕೆಯ ಗಂಡ ರಾಜು ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
- Advertisement -