Sunday, May 19, 2024
spot_imgspot_img
spot_imgspot_img

ಆದಿತ್ಯ – ಎಲ್1 ಉಡಾವಣೆಗೆ ಕ್ಷಣಗಣನೆ ಆರಂಭ

- Advertisement -G L Acharya panikkar
- Advertisement -

ಚಂದ್ರನ ಮೇಲೆ ಕಾಲಿಟ್ಟು ಜಗತ್ತನ್ನೇ ನಿಬ್ಬೆರಗಾಗಿಸಿರೋ ಇಸ್ರೋ ವಿಜ್ಞಾನಿಗಳು ಸೂರ್ಯನ ಅಧ್ಯಯನಕ್ಕೆ ಮುಂದಾಗಿದ್ದಾರೆ. ಆದಿತ್ಯ ಎಲ್-1 (Aditya L-1) ಪ್ರಯೋಗಕ್ಕೆ ವೇದಿಕೆ ಸಜ್ಜಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಲ್ಲಿ ಇಂದು ಬೆಳಗ್ಗೆ 11.50ಕ್ಕೆ ಸರಿಯಾಗಿ ಆದಿತ್ಯ ಎಲ್1 ಹೊತ್ತ ಪಿಎಸ್‍ಎಲ್‍ವಿ-ಸಿ57 ರಾಕೆಟ್ ನಭಕ್ಕೆ ಚಿಮ್ಮಲಿದೆ. ಈ ಪ್ರಯೋಗದ ಹಿನ್ನೆಲೆಯಲ್ಲಿ ಶುಕ್ರವಾರ ಆದಿತ್ಯ ಎಲ್1 ಆಕೃತಿ ಹೊತ್ತ ಇಸ್ರೋ ವಿಜ್ಞಾನಿಗಳ ತಂಡ ತಿರುಮಲ ತಿಮ್ಮಪ್ಪನನ್ನು ದರ್ಶಿಸಿದೆ.

ಚಂದ್ರಯಾನ್, ಮಂಗಳಯಾನ್ ನಂತ್ರ ಇಸ್ರೋ ಕೈಗೊಳ್ಳುತ್ತಿರುವ ಅತ್ಯಂತ ಪ್ರಮುಖ ಯೋಜನೆ ಇದಾಗಿದೆ. ಇದೇ ಮೊದಲ ಬಾರಿ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಸೌರಮಂಡಲದ ಅಧಿಪತಿಯಲ್ಲಿ ಶಾಖ, ಬೆಳಕು ಹೇಗೆ ಉತ್ಪತ್ತಿಯಾಗುತ್ತೆ ಎಂದು ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ಇದೀಗ ಜಗತ್ತನ್ನೇ ಕಾಡುತ್ತಿರೋ ಪ್ರಶ್ನೆಗಳಿಗೆ ಉತ್ತರ ನೀಡಲು ಇಸ್ರೋ ವಿಜ್ಞಾನಿಗಳು ಮೈಕೊಡವಿ ನಿಂತಿದ್ದಾರೆ. ಇದಕ್ಕೆ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳ ಅಂತರಿಕ್ಷ ಸಂಸ್ಥೆಗಳ ನೆರವನ್ನು ಇಸ್ರೋ ಪಡೆಯುತ್ತಿದೆ. ಈ ಪ್ರಯೋಗವನ್ನು ನೇರವಾಗಿ ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಆದರೆ ಮೊದಲೇ ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಸೂರ್ಯಶಿಕಾರಿಗೆ ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರಕ್ಕೆ ಹೋಗುತ್ತಿರೋ ಆದಿತ್ಯ ಎಲ್1 ನೌಕೆಯಲ್ಲಿ 7 ಅಸ್ತ್ರಗಳಿವೆ. ವೈಜ್ಞಾನಿಕ ಭಾಷೆಯಲ್ಲಿ ಅವುಗಳನ್ನು ಪೇ ಲೋಡ್ಸ್ ಎಂದು ಕರೆಯಲಾಗುತ್ತೆ. ಪೇ ಲೋಡ್‌ಗಳು ಅಂದರೆ ಸಾಧನಗಳು, ಉಪಕರಣಗಳು. ಸೂರ್ಯನನ್ನು ವಿವಿಧ ಆಯಾಮದಲ್ಲಿ ಅಧ್ಯಯನ ಮಾಡುವುದು. ಅಧ್ಯಯನ ಮಾಡಿದ ಬಳಿಕ ವರದಿಯನ್ನು ಕಳುಹಿಸೋದು ಅವುಗಳ ಕೆಲಸ. ಅಷ್ಟಕ್ಕೂ.. ಆದಿತ್ಯನ ಬತ್ತಳಿಕೆಯಲ್ಲಿರೋ ಆ 7 ಸಾಧನಗಳ ಯಾವುದು ಅನ್ನೋ ಬಗ್ಗೆ ಇಸ್ರೋದ ಉಪನಿರ್ದೇಶಕರಾದ ಮಾಹಿತಿ ನೀಡಿದ್ದಾರೆ.

ಇದರಲ್ಲಿ 7 ಪೇಲೋಡ್​ಗಳಿವೆ. ಅವುಗಳೆಂದರೆ, ವಿಸಿಬಲ್, ಎಮಿಷನ್, ಕರೋನಗ್ರಫಿ. ಸೋಲಾರ್ ಅಲ್ಟ್ರಾವೈಲೆಂಟಿಂಗ್ ಇಮೇಜಿಂಗ್ ಟೆಲಿಸ್ಕೋಫ್. ಸೋಲಾರ್ ಲೋ ಎನರ್ಜಿ ಎಕ್ಸ್​ರೇ ಸ್ಪೆಕ್ರೋ ಮೀಟರ್, ಐ ಎನರ್ಜಿ ಎಲ್ 1 ಆರ್ಬಿಟಿಂಗ್ ಎಕ್ಸ್​ರೇ ಸ್ಪೆಕ್ರೋ ಮೀಟರ್, ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್​ ಎಕ್ಸ್​ಪ್ರೆಮೆಂಟ್, ಪ್ಲಾಸ್ಮಾ ಅನಾಲೈಸರ್ ಪ್ಯಾಕೇಜ್ ಫಾರ್ ಆದಿತ್ಯ, ಅಡ್ವಾನ್ಸ್​ ಟ್ರೈಆಕ್ಸಿಲ್ ಹೈ ರೆಸ್ಯೂಲೆಷನ್ ಡಿಜಿಟಲ್​ ಈ ಎಲ್ಲ ಪೇಲೋಡ್​ಗಳಿ ಆದಿತ್ಯ ಎಲ್​-1ನಲ್ಲಿ ಇವೆ.

- Advertisement -

Related news

error: Content is protected !!