Sunday, October 6, 2024
spot_imgspot_img
spot_imgspot_img

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಡ್ವಾಣಿ, ಜೋಶಿಗಿಲ್ಲ ಆಹ್ವಾನ..?

- Advertisement -
- Advertisement -

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಹೀಗಾಗಿ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಾರತೀಯರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ರಾಮಮಂದಿರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ.

ಕಾರಣ ಏನಿರಬಹುದು..?

ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಮಂದಿರ ನಿರ್ಮಾಣ ಟ್ರಸ್ಟ್ ಇಲ್ಲಿಯವರೆಗೆ ಅಡ್ವಾಣಿ ಅವರಿಗೆ ಆಮಂತ್ರಣ ಕಳುಹಿಸಿರುವ ಯಾವುದೇ ಮಾಹಿತಿಯನ್ನು ದೃಢಪಡಿಸಿಲ್ಲ. 80-90ರ ದಶಕದಲ್ಲಿ ರಾಮಮಂದಿರ ಚಳುವಳಿಯಲ್ಲಿ ಅಡ್ವಾಣಿಯವರು ಅಗ್ರ ಪಂಕ್ತಿ ನಾಯಕರಾಗಿದ್ದರು. ಆದರೆ ಅವರನ್ನೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಡೆಗಣಿಸಲಾಗುತ್ತಿದೆಯೇ ಎಂಬ ಅಸಮಾಧಾನ ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಇನ್ನೂ ಅಡ್ವಾಣಿ ಅವರಿಗೆ ಯಾವುದೇ ಆಮಂತ್ರಣ ಸಿಕ್ಕಿಲ್ಲ. ಕಾರ್ಯಕ್ರಮಕ್ಕೆ ಇನ್ನೂ 3 ದಿನಗಳು ಬಾಕಿಯಿರುವುದರಿಂದ ಆಮಂತ್ರಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ.

ಕೊರೊನಾ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಯೋಸಹಜ ಕಾಯಿಲೆ ಇರುವವರಿಗೆ ಆಮಂತ್ರಣ ನೀಡಿಲ್ಲವಾಗಿರಬಹುದು ಎಂಬುದು ಕೆಲವರ ಊಹೆಯಾಗಿದೆ. ಇತ್ತೀಚೆಗಷ್ಟೇ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಲಕ್ನೋದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು . ಈ ಎಲ್ಲ ಕಾರಣಗಳಿಂದಾಗಿ ಎಲ್.ಕೆ.ಅಡ್ವಾಣಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಮಾತುಗಳುಕೇಳಿಬರುತ್ತಿವೆ.

ಮುರುಳಿ ಮನೋಹರ್ ಜೋಷಿಗೂ ಬಂದಿಲ್ಲ ಆಹ್ವಾನ:
ಇನ್ನು ರಾಮಮಂದಿರ ಚಳುವಳಿಯಲ್ಲಿ ಭಾಗವಹಿಸಿದ್ದ ಪ್ರಮುಖರಲ್ಲಿ ಒಬ್ಬರಾದ ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ್ ಜೋಷಿಗೂ ಇದುವರೆಗೂ ಶಿಲಾನ್ಯಾಸ ಕಾರ್ಯಕ್ರಮದ ಆಹ್ವಾನ ಬಂದಿಲ್ಲ. ಇವರು ಕೂಡ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ವಿಚಾರಣೆಗಾಗಿ ಸಿಬಿಬಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಬಿಜೆಪಿ ನಾಯಕಿ ಉಮಾಭಾರತಿಗೆ ಆಹ್ವಾನ:

ಮತ್ತೊಂದು ಅಚ್ಚರಿ ವಿಷಯ ಏನೆಂದರೆ ಅಡ್ವಾಣಿ ಜತೆ ರಾಮಮಂದಿರ ಚಳಿವಳಿಯಲ್ಲಿ ಭಾಗವಹಿಸಿದ್ದ ಮಧ್ಯಪ್ರದೇಶ ಮಾಜಿ ಸಿಎಂ, ಬಿಜೆಪಿ ನಾಯಕಿ ಉಮಾಭಾರತಿ ಅವರಿಗೆ ರಾಮಮಂದಿರ ಭೂಮಿ ಪೂಜೆಗೆ ಆಹ್ವಾನ ನೀಡಲಾಗಿದೆ. 1992 ಅವಧಿಯಲ್ಲಿ ಉತ್ತರ ಪ್ರದೇಶ ಸಿಎಂ ಆಗಿದ್ದ ಕಲ್ಯಾಣ ಸಿಂಗ್ ಅವರನ್ನೂ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ರಾಮಮಂದಿರ ಚಳುವಳಿಯ ಪ್ರಮುಖ ಹೋರಾಟಗಾರರಿಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಹಿನ್ನಲೆ ಬಿಜೆಪಿ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

- Advertisement -

Related news

error: Content is protected !!