Monday, April 29, 2024
spot_imgspot_img
spot_imgspot_img

ಹುಟ್ಟು ಹಬ್ಬ ಸಂಭ್ರಮಾಚರಣೆ ಬಳಿಕ ಜಾಲಿ ರೈಡ್​ ಹೋಗುತ್ತಿದ್ದ ಯುವಕರ ಕಾರು ಅಪಘಾತ

- Advertisement -G L Acharya panikkar
- Advertisement -

ಹುಟ್ಟು ಹಬ್ಬ ಸಂಭ್ರಮಾಚರಣೆ ಬಳಿಕ ಜಾಲಿ ರೈಡ್​​ ಹೋಗುತ್ತಿದ್ದಾಗ ಕಾರು ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದು ಜಮೀನಿನಲ್ಲಿ ಉರುಳಿಬಿದ್ದ ಘಟನೆ ಹಾಸನ ತಾಲೂಕಿನ ಮಡೆನೂರು ಫ್ಲೈಓವರ್ ಬಳಿ ನಡೆದಿದೆ. ಕಾರಿನಲ್ಲಿದ್ದ ರಕ್ಷಿತ್(22), ಕುಶಾಲ್(24) ಮೃತ ದುರ್ದೈವಿಗಳು.

ಹುಟ್ಟು ಹಬ್ಬ ಸಂಭ್ರಮಾಚರಣೆ ಬಳಿಕ ಹಾಸನ ತಾಲೂಕಿನ ಮಡೆನೂರು ಫ್ಲೈಓವರ್ ಬಳಿ ಕಾರಿನಲ್ಲಿ ಜಾಲಿ ರೈಡ್​​ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ರಕ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕುಶಾಲ್ ಸಾವಿಗೀಡಾಗಿದ್ದಾನೆ. ಇನ್ನು ಕಾರಿನಲ್ಲಿದ್ದ ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚನ್ನರಾಯಪಟ್ಟಣದ ಯುವಕರು ಹುಟ್ಟುಹಬ್ಬದ ಆಚರಣೆಗೆ ಗಿರೀಶ್ ಎಂಬುವರಿಂದ ಕಾರು ಪಡೆದುಕೊಂಡು ಹಾಸನಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!