Sunday, June 21, 2026
spot_imgspot_img
spot_imgspot_img

ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾಗಿ ಅಬೂಬಕ್ಕರ್ ಪಲ್ಲಮಜಲು ಆಯ್ಕೆ.

- Advertisement -
- Advertisement -

ಬಿ.ಸಿ.ರೋಡ್: ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಕೆ.ಎಸ್.ಅಬೂಬಕ್ಕರ್ ಪಲ್ಲಮಜಲು ಆಯ್ಕೆಯಾಗಿದ್ದಾರೆ. ಪರಿಷತ್ ಅಧ್ಯಕ್ಷರಾದ ಬಿ.ಎ.ಮುಹಮ್ಮದ್ ಹನೀಫ್ ಇವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಯೂಸುಫ್ ವಕ್ತಾರ್, ಉಪಾಧ್ಯಕ್ಷರಾಗಿ ಖಾಲಿದ್ ಉಜಿರೆ, ಶಾಹುಲ್ ಹಮೀದ್ ಮೆಟ್ರೊ, ಅಬ್ದುಲ್ ಲತೀಫ್ ನೇರಳಕಟ್ಟೆ, ಅಹ್ಮದ್ ಬಾವ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝಿಝ್ ಹಖ್, ಕೋಶಾಧಿಕಾರಿಯಾಗಿ ನಿಸಾರ್ ಫಕೀರ್ ಮುಹಮ್ಮದ್, ಕಾರ್ಯದರ್ಶಿಗಳಾಗಿ ಪಿ. ಎಮ್. ಸಯೀದ್ ಸುಳ್ಯ, ಎಮ್.ಎಸ್.ಸಿದ್ದೀಕ್ ಫರಂಗಿಪೇಟೆ, ಪಿ.ಎಮ್.ಅಶ್ರಫ್ ಆಲಡ್ಕ, ಇಸ್ಮಾಯಿಲ್ ಪೆರಿಂಜೆ, ಡಿ.ಹಬೀಬುಲ್ಲ ಕಣ್ಣೂರು, ಹಸನಬ್ಬ ಮೂಡಬಿದ್ರೆ, ಅಬ್ಬಾಸ್ ಬಿಜೈ, ಹನೀಫ್ ಬಜಾಲ್, ಅಬ್ದುಲ್ ಹಕೀಮ್ ಕೂರ್ನಡ್ಕ, ಇ.ಕೆ.ಹುಸೈನ್ ಕೂಳೂರು. ಸಂಘಟನಾ ಕಾರ್ಯದರ್ಶಿಗಳಾಗಿ ಇಬ್ರಾಹಿಮ್ ನಡುಪದವು, ಎನ್.ಇ.ಮುಹಮ್ಮದ್, ಬಶೀರ್ ಮೊಂಟೆಪದವು, ಕೆ.ಸಿ.ಹುಸೈನ್, ಅಮೀರ್ ಹರೇಕಳ, ಯು.ಮುಸ್ತಫ ಪಾಣೆಮಂಗಳೂರು, ಪಿ.ಸಿ.ಆದಮ್ ಪೆರಿಂಜೆ,
ಎಮ್.ಪಿ.ಅಬ್ದುಲ್ ಖಾದರ್, ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಬಿ.ಎಮ್.ಮಮ್ತಾಝ್ ಆಲಿ, ಜೆ.ಹುಸೈನ್, ಬಿ.ಎ.ಮುಹಮ್ಮದ್ ಹನೀಫ್, ಮುಹಮ್ಮದ್ ಕುಂಜತ್ ಬೈಲ್, ಅಬ್ದುಲ್ ಲತೀಫ್ ಕಂದಕ್, ನಾಸಿರ್ ಲಕ್ಕಿಸ್ಟಾರ್, ಎಫ್.ಎ.ಅಬ್ದುಲ್ ಖಾದರ್ ಫರಂಗಿಪೇಟೆ, ಯಾಕುಬ್ ಗುರುಪುರ, ಅಲಿ ಅಬ್ಬಾಸ್ ಸೂರಲ್ಪಾಡಿ ಅವರನ್ನು ಸರ್ವಾನುಮತದಿಂದ ನೇಮಕಗೊಂಡರು.

ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರಿಯಾಝ್ ಬಂಟ್ವಾಳ, ಎಮ್.ಟಿ.ಕೆರೀಮ್, ಬಿ.ಎ. ಅಬೂಬಕ್ಕರ್ ಕಲ್ಲಾಡಿ, ಹಾರಿಸ್ ಪಿ, ಕೆ.ಸಿ.ಅಬ್ದುಲ್ ಖಾದರ್, ನಿಸಾರ್ ಮುಹಮ್ಮದ್, ಮನ್ಸೂರ್ ಇವರನ್ನು ಆರಿಸಲಾಯಿತು. ಕೆ.ಎಸ್.ಅಬೂಬಕ್ಕರ್ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಬಿ.ಎ. ಮುಹಮ್ಮದ್ ಹನೀಫ್ ಪ್ರಾಸ್ತಾವಿಕ ಭಾಷಣ ಮಾಡಿದರು. ಯುೂಸುಫ್ ವಕ್ತಾರ್ ಲೆಕ್ಕ ಪತ್ರ ಮಂಡಿಸಿ ವಂದಿಸಿದರು.

- Advertisement -

Related news

error: Content is protected !!