- Advertisement -
- Advertisement -
ಪುತ್ತೂರು:- ಬಾನುವಾರ( 19.07.2020 )ರಂದು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಕೆಎ 19 ಎಸಿ 9962 ನೇ ನಂಬ್ರದ ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಸಿ, ಸಾಗಾಟ ಮಾಡುತ್ತಿದ್ದಾಗ ತಡೆದ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ವಾಹನದಲ್ಲಿದ್ದ ಆರೋಪಿಗಳಾದ ಕುಂಡಡ್ಕ ಶಾಂತಿಮಾರು ವಿಟ್ಲ ನಿವಾಸಿ 1) ಮಹಮ್ಮದ್ ಮುವಾಜ್ (28 ವರ್ಷ), 2) ಕಂಬಳಬೆಟ್ಟು , ವಿಟ್ಲ ನಿವಾಸಿ ಮೊಹಮ್ಮದ್ ಹ್ಯಾರೀಶ್ ಪ್ರಾಯ: 38 ವರ್ಷ, 3) ಕಡಬ ಕೆಮ್ಮಾರ ಕೊಯಿಲ ಗ್ರಾಮದ ನಿವಾಸಿ ಮೊಹಮ್ಮದ್ ಫೈಸಲ್ ಪ್ರಾಯ: 24 ವರ್ಷ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು, ವಾಹನದಲ್ಲಿದ್ದ 4 ಜಾನುವಾರುಗಳನ್ನು ಮತ್ತು ಪಿಕಪ್ ವಾಹನವನ್ನು ಸ್ವಾಧೀನಪಡಿಸಿಕೊಂಡು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -