Monday, May 20, 2024
spot_imgspot_img
spot_imgspot_img

ಪುತ್ತೂರು: ಶ್ವಾನಕ್ಕೂ ಮಾಸ್ಕ್ ಧರಿಸಿ ಪೇಟೆ ಸುತ್ತಿಸಿದ ಪ್ರೀತಿಯ ಯಜಮಾನ!

- Advertisement -G L Acharya panikkar
- Advertisement -

ಪುತ್ತೂರು: ಕೋವಿಡ್ ಹರಡುವುದನ್ನು ತಡೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಪಾಡಿಕೊಳ್ಳಬೇಕು ಎಂದು ಎಷ್ಟೇ ಹೇಳಿದರೂ ಜನರು ಕಿವಿಗೆ ಹಾಕೋದೇ ಇಲ್ಲ. ಆದರೆ, ಇಲ್ಲೊಬ್ಬರು ತನ್ನ ಪ್ರೀತಿಯ ಶ್ವಾನಕ್ಕೂ ಮಾಸ್ಕ್ ಧರಿಸುವ ಮೂಲಕ ಜಾಗೃತಿಯ ಸಂದೇಹ ರವಾನಿಸಿದ್ದಾರೆ.

ಕೋವಿಡ್‌ ಕರ್ಫ್ಯೂ ವೇಳೆ ಬೆಳಿಗ್ಗೆ 6ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಪುತ್ತೂರು ನಗರದದ ದರ್ಬೆಯಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸರು ಅನಗತ್ಯ ಓಡಾಟದ ವಾಹನಗಳನ್ನು ನಿಯಂತ್ರಿಸುವ ಸಲುವಾಗಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಶ್ವಾನಕ್ಕೂ ಮಾಸ್ಕ್ ಧಾರಣೆ ಮಾಡಿರುವುದು ಕಂಡು ಬಂದಿದೆ.

ದರ್ಬೆ ಪ್ರವೀಣ್ ಡ್ರೈವಿಂಗ್ ಸ್ಕೂಲ್ ಸಂಸ್ಥೆಯ ಮಾಲೀಕ ಪ್ರವೀಣ್ ಡಿಸೋಜ ಅವರು ತನ್ನ ಪ್ರೀತಿಯ ಎರಡೂವರೆ ವರ್ಷದ ಶ್ವಾನದ ಮುಖಕ್ಕೆ ಮಾಸ್ಕ್ ಹಾಕಿ, ತನ್ನ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡಿದ್ದರು.
ಕ್ವಾರೈಂಟನ್‌ನಲ್ಲಿರುವವರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಹಾಗೂ ಕೋವಿಡ್ ಲಸಿಕೆ ಪಡೆಯಲು ಬಯಸುವವರನ್ನು ತಮ್ಮ ವಾಹನದಲ್ಲಿ ಉಚಿತವಾಗಿ ಕರೆದುಕೊಂಡು ಹೋಗುವ ಸೇವೆಯನ್ನೂ ಪ್ರವೀಣ್ ಡಿಸೋಜ ಮಾಡುತ್ತಿದ್ದಾರೆ.

- Advertisement -

Related news

error: Content is protected !!