Sunday, June 15, 2025
spot_imgspot_img
spot_imgspot_img

ಅಕ್ರಮ ಗೋಸಾಗಾಟವನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆಯ ಕಾರ್ಯಕರ್ತರು

- Advertisement -
- Advertisement -

ವಿಟ್ಲ: ಹಿಂದೂ ಸಂಘಟನೆಯ ಕಾರ್ಯಕರ್ತರು ಅಕ್ರಮ ಗೋಸಾಗಾಟವನ್ನು ಪತ್ತೆ ಹಚ್ಚಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತೂರು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಆಪೆ ರಿಕ್ಷಾ ಒಂದರಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಅರಿತ ಹಿಂದೂ ಸಂಘಟನೆಯ ಕಾರ್ಯಕರ್ತರು ಮಿತ್ತೂರು ಎಂಬಲ್ಲಿ ವಾಹನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಆ ವಾಹದಲ್ಲಿ ಎರಡು ದನದ ಕರುಗಳು ಪತ್ತೆಯಾಗಿದೆ. ಬಳಿಕ ವಾಹನ, ಎರಡು ಕರುಗಳ ಸಹಿತ ಅದರಲ್ಲಿದ್ದ ಇಬ್ಬರನ್ನು  ವಿಟ್ಲ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!