Saturday, June 13, 2026
spot_imgspot_img
spot_imgspot_img

ಅಕ್ರಮ ಜಾನು​ವಾರು ಸಾಗಾ​ಟ- ಮೂವರ ಬಂಧ​ನ

- Advertisement -
- Advertisement -

ಕಾರವಾರ(ನ.4): ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಜಾನುವಾರುಗಳನ್ನು ರಕ್ಷಿಸಿ 3 ಜನರನ್ನು ಬಂಧಿಸಿದ ಘಟನೆ ಯಲ್ಲಾಪುರ ಪಟ್ಟಣದ ಜೋಡುಕೆರೆ ಬಳಿ ರಾಷ್ಟ್ರೀಯ ಹೆದ್ದಾರ63 ರಲ್ಲಿ ನಡೆದಿದೆ.

ಬಂಧಿತರನ್ನು ಹರಿಯಾಣದ ಬಿವಾಣಿಯ ಮನಪೂಲ್‌ಸಿಂಗ್‌ ಜಗನ್ನಾಥ, ಈಶ್ವರ ಸಿಂಗ್‌ ವಿಜಯ ಸಿಂಗ್‌ ಹಾಗೂ ಕೇರಳದ ರಿಜಿ ಫಿಲೀಫ್‌ ಎಂದು ಗುರುತಿಸಲಾಗಿದೆ. ಇವರು ಹರಿಯಾಣದಿಂದ ಕೇರಳದ ಕಡೆಗೆ ಮಿನಿ ಲಾರಿಯಲ್ಲಿ 5 ಎಮ್ಮೆಗಳು ಹಾಗೂ ಒಂದು ಹಸುವನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ಬಲಿಕೊಡುವ ಉದ್ದೇಶದಿಂದ ಸಾಗಿಸುತ್ತಿದ್ದರು.

 ಜೋಡುಕೆರೆ ಬಳಿ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟದ ಸಂಗತಿ ಬಯಲಾಗಿದೆ. 6 ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!