Saturday, June 20, 2026
spot_imgspot_img
spot_imgspot_img

ವಿಟ್ಲ: ಅಲ್ ಖೈರ್ ಮಹಿಳಾ ಶರೀಯತ್ ಕಾಲೇಜಿನ ಏಳನೇ ವಾರ್ಷಿಕ ಮತ್ತು ಪದವಿ ಪ್ರದಾನ

- Advertisement -
- Advertisement -

ವಿಟ್ಲ: ಮೇಗಿನಪೇಟೆ ಅಲ್ ಖೈರ್ ಮಹಿಳಾ ಶರೀಯತ್ ಕಾಲೇಜ್ ನ ಏಳನೇ ವಾರ್ಷಿಕ ಹಾಗೂ 2 ನೇ ಪದವಿ ಪ್ರದಾನ ಸಮಾರಂಭವು ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್ಸ್ ಅಧ್ಯಕ್ಷತೆಯಲ್ಲಿ ನಡೆಯಿತು. ‌

ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು ‌. ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮುಖ್ಯ ಭಾಷಣ ಮಾಡಿದರು. ಮೂಸಲ್ ಫೈಝಿ ಪ್ರಸ್ತಾವಿಕವಾಗಿ ಮಾತನಾಡಿದರು.

ಸೈಯದ್ ಇಬ್ರಾಹಿಂ ಬಾತಿಷ್ ತಂಙಳ್ ಆನೆಕಲ್ ,21 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಿದರು.ಈ ಸಂದರ್ಭ ಮಿಲಾದ್ ಕ್ವಿಝ್ ವಿಜೇತರಿಗೆ ಮತ್ತು ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾಲೇಜ್ ನ ರೂವಾರಿಗಳಾದ ಇಕ್ಬಾಲ್ ಶೀತಲ್, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ದಾವೂದ್ ಹನೀಫಿ, ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಕೋಶಾಧಿಕಾರಿ ಶರೀಫ್ ಪೊನ್ನೋಟು,ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಅಬ್ಬಾಸ್ ದಾರಿಮಿ ಕೆಲಿಂಜ,ಇಬ್ರಾಹಿಂ ಫೈಝಿ ಕುಡ್ತಮುಗೇರು,ಹಕೀಂ ಪರ್ತಿಪಾಡಿ,ಶರೀಫ್ ಮೂಸಾ ಕುದ್ದುಪದವು,ಅಶ್ರಫ್ ಕಬಕ, ನೌಶೀನ್ ಬದ್ರಿಯಾ, ಶಾಕಿರ್ ಅಳಕೆಮಜಲು,ಖಲಂದರ್ ಪರ್ತಿಪಾಡಿ, ಸಂಸ್ಥೆಯ ಸದಸ್ಯರಾದ ರಫೀಕ್ ಪೊನ್ನೋಟ್ಟು, ಮಹಮ್ಮದ್ ಅಲಿ ವಿಟ್ಲ, ಮುಂತಾದವರು ಉಪಸ್ಥಿತರಿದ್ದರು. ಕೆ.ಎಂ.ಎ.ಕೊಡಂಗಾಯಿ ಸ್ವಾಗತಿಸಿ ನಿರೂಪಿಸಿದರು. ಹಾಜಿ ಹಕೀಂ ಅರ್ಷದಿ ವಂದಿಸಿದರು

- Advertisement -

Related news

error: Content is protected !!