Saturday, September 19, 2026
spot_imgspot_img
spot_imgspot_img

ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಅಳಕೆಮಜಲು ಇದರ ಬೆಳ್ಳಿಹಬ್ಬ ಸಮಿತಿ ರಚನೆ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕಶಾಲೆ ಅಳಕೆಮಜಲು ಶಾಲೆಯು 1997 ರಲ್ಲಿ ಆರಂಭಗೊಂಡು, 2022-23ನೇ ಸಾಲಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಬೆಳ್ಳಿ ಹಬ್ಬವನ್ನು ಆಚರಿಸುವರೇ ಬೆಳ್ಳಿಹಬ್ಬ ಸಮಿತಿಯನ್ನು ಎಸ್ಡಿಎಂಸಿ ಅಧ್ಯಕ್ಷ ರಾದ ಸುಮಲತಾ ಅವರ ಅಧ್ಯಕ್ಷತೆಯಲ್ಲಿ, ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಬೆಳ್ಳಿಹಬ್ಬ ಸಮಿತಿಯನ್ನು ರಚಿಸಲಾಯಿತು.

ಶಾಲೆಯು ಬೆಳೆದುಬಂದ ಹಾದಿಯ ಬಗ್ಗೆ ರಾಜಾರಾಮ್ ಶೆಟ್ಟಿ ಕೋಲ್ಪೆ ಗುತ್ತು ಮಾತನಾಡಿದರು.
ಬೆಳ್ಳಿಹಬ್ಬ ಸಮಿತಿಯ ಗೌರವ ಸಲಹೆಗಾರರಾಗಿ ರಾಜರಾಮ್ ರಾಮ್ ಶೆಟ್ಟಿ ಕೋಲ್ಪೆ ಗುತ್ತು, ಅಬ್ದುರ್ರಹ್ಮಾನ್ ಹಾಜಿ (ಮಸ್ಕತ್) ಅಳಕೆಮಜಲು , ಸೋಮಶೇಖರ ಶೆಟ್ಟಿ ಅಳಕೆಮಜಲು, ಮೊಹಮ್ಮದ್ ಕುಂಞ, ಕೃಷ್ಣಪ್ಪ ಕೆಮನಾಜೆ ಶಾಕಿರ್ ಅಳಕೆಮಜಲು ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಕಾರ್ಯಾಧ್ಯಕ್ಷರಾಗಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಅಧ್ಯಕ್ಷರಾಗಿ ಪದ್ಮನಾಭ ಸಪಲ್ಯ ಕೊಡೆಂಚರಪಾಲು ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ ಸುಮಲತಾ , ಕಾರ್ಯದರ್ಶಿಗಳಾಗಿ ಶ ತಿರುಮಲೇಶ್ವರ ಕೋಶಾಧಿಕಾರಿಯಾಗಿ ಶಿಕ್ಷಕ ಇಸ್ಮಾಯಿಲ್ ಕೆ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಚಿದಾನಂದ, ಇಬ್ರಾಹಿಂ ಬಾತಿಸ್, ಜಗದೀಶ್, ಪ್ರದೀಪ್ ಅವರನ್ನು ಆಯ್ಕೆ ಮಾಡಲಾಯಿತು.. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಉಪ ಸಮಿತಿಗಳನ್ನು ರಚಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಪದ್ಮನಾಭ ಸಪಲ್ಯ ಕೊಡೆಂಚರಪಾಲು ಇವರು ಬೆಳ್ಳಿಹಬ್ಬದ ಸವಿನೆನಪಿಗಾಗಿ ಪ್ರವೇಶದ್ವಾರವನ್ನು ಕೊಡುಗೆ ನೀಡುವುದಾಗಿ ಘೋಷಿಸಿದರು.. ಹಾಜರಿದ್ದ ಎಲ್ಲಾ ಸದಸ್ಯರು ತಮ್ಮಿಂದಾಗುವ ಕೊಡುಗೆ ನೀಡುವ ಬಗ್ಗೆ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಧೀರ್, ಮಹಮ್ಮದ್ ಶಾಕಿರ್, ಚಿದಾನಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯ ಪ್ರತಿನಿಧಿ ಯಾಗಿ ಕಂಬಳಬೆಟ್ಟು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ನಾಯ್ಕ್ , ಎಸ್ಡಿಎಂಸಿ ಸದಸ್ಯರು ,ಹಿರಿಯ ವಿದ್ಯಾರ್ಥಿಗಳು, ಶಾಲಾ ಹಿತೈಸಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಬೆನೆಡಿಕ್ಟ ಮೆಂಡೊನ್ಸಾ ನಡೆಸಿಕೊಟ್ಟರು. ಶಿಕ್ಷಕಿ ರಾಜೀವಿ ವಂದನಾರ್ಪಣೆಗೈದರು. ಶಿಕ್ಷಕಿ ಜಯಂತಿ ನಾಯ್ಕ ಅನುರಾಧ ಸಹಕರಿಸಿದರು. ಶಿಕ್ಷಕರಾದ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!