Tuesday, July 21, 2026
spot_imgspot_img
spot_imgspot_img

ಅಳಿಕೆ: ಶ್ರೀ ಸತ್ಯಸಾಯಿ ಲೋಕಸೇವಾಪದವಿ ಪೂರ್ವ ಕಾಲೇಜು ಅಳಿಕೆ ಶೇ.100 ಫಲಿತಾಂಶ; ರಾಜ್ಯಕ್ಕೆ ಯಶಸ್ ಯು 7ನೇ ರ‍್ಯಾಂಕ್‌, ಪಿ. ನಂದನ್ ಹೆಬ್ಬಾರ್ 8ನೇ ರ‍್ಯಾಂಕ್‌, ಶಮಿತ್ ವಿ.ಕೆ. 3ನೇ ರ‍್ಯಾಂಕ್‌ ಮತ್ತು ಪ್ರಜ್ವಲ್ ಕೆ.ಎನ್ 4ನೇ ರ‍್ಯಾಂಕ್

- Advertisement -
- Advertisement -

ಅಳಿಕೆ: 2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ.ಯ ಫಲಿತಾಂಶ ಪ್ರಕಟವಾಗಿದ್ದು, ಅಳಿಕೆ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಶೇಕಡಾ 100 ಫಲಿತಾಂಶವನ್ನು ದಾಖಲಿಸಿದೆ.

ಒಟ್ಟು 213 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 166 ಮಂದಿ ವಿಶಿಷ್ಟ ಶ್ರೇಣಿ, 46 ಮಂದಿ ಪ್ರಥಮ ದರ್ಜೆ ಹಾಗೂ ಓರ್ವ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಯಶಸ್ ಯು. ಇವರು 592 ಅಂಕಗಳನ್ನು ಪಡೆದು ರಾಜ್ಯಕ್ಕೆ 7 ನೇಯರ‍್ಯಾಂಕ್ ಹಾಗೂ ಪಿ. ನಂದನ್ ಹೆಬ್ಬಾರ್ ಇವರು 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8 ನೇ ರ‍್ಯಾಂಕ್ ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದ ಶಮಿತ್ ವಿ.ಕೆ. ಇವರು 595 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ರ‍್ಯಾಂಕ್ಹಾ ಗೂ ಪ್ರಜ್ವಲ್ ಕೆ.ಎನ್. 594 ಅಂಕಗಳೊಂದಿಗೆ 4ನೇ ರ‍್ಯಾಂಕ್ ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ ಮನು ಭಟ್, ಇವರು 584 ಅಂಕಗಳನ್ನು ಪಡೆದು ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಭೂಮಿತ್ N.OZA ಹಾಗೂ ಶ್ರೀ ರಾಮ್ 98.% ಹಾಗೂ ಶಶಾಂಕ್ ಎಮ್. ಅಮೀನ್‌ 86.67% ಗಳಿಸಿದ್ದಾರೆ. ಸಾಂಸ್ಕೃತದಲ್ಲಿ 9 ಮಂದಿ, ಭೌತಶಾಸ್ತ್ರದಲ್ಲಿ1, ರಸಾಯನಶಾಸ್ತ್ರದಲ್ಲಿ 6, ಗಣಿತ 5, ಜೀವಶಾಸ್ತ್ರದಲ್ಲಿ17,

ಮೂಲಗಣಿತ 3, ಲೆಕ್ಕಶಾಸ್ತ್ರದಲ್ಲಿ 5, ವ್ಯವಹಾರ ಅಧ್ಯಯನ 1, ಅರ್ಥಶಾಸ್ತ್ರದಲ್ಲಿ 3 ಮತ್ತು ಸಂಖ್ಯಾಶಾಸ್ತ್ರದಲ್ಲಿ 6 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿರುತ್ತಾರೆ.

- Advertisement -

Related news

error: Content is protected !!