


ಅಳಿಕೆ: ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ ಅಳಿಕೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಎಲ್ಲಾ ವಿದ್ಯಾರ್ಥಿಗಳು ಯೋಗ ಮಾಡುವುದರ ಮೂಲಕ ಆಚರಿಸಲಾಯಿತು.


ಕಾರ್ಯಕ್ರಮವನ್ನು ಶ್ರೀ ಸತ್ಯ ಸಾಯಿ ಲೋಕಸೇವಾ ಬಾಲಕುಟೀರ ಅಳಿಕೆಯ ವಾರ್ಡನ್ ಉದನೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.


410 ಬಾಲಕರು ಮತ್ತು 107 ಬಾಲಕಿಯರು ಸೇರಿ ಒಟ್ಟು 517 ವಿದ್ಯಾರ್ಥಿಗಳು ಶಾರದ ವಿಹಾರದ ಸಾಯಿ ಸಮರ್ಪಣಂ ಪ್ರಾರ್ಥನಾ ಮಂದಿರದಲ್ಲಿ ಶ್ರೀ ಸತ್ಯ ಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಯೋಗ ಗುರುಗಳಾದ ಆನಂದ ಶೆಟ್ಟಿ ಇವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕುಳಿತು ಮಾಡುವ ಆಸನ, ನಿಂತು ಮಾಡುವ ಆಸನ, ಮಲಗಿ ಮಾಡುವ ಆಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿ ಎಲ್ಲರ ಗಮನವನ್ನು ಸೆಳೆದರು.

ಶ್ರೀ ಸತ್ಯ ಸಾಯಿ ಲೋಕಸೇವಾ ಪ್ರೌಢಶಾಲೆಯ ನಿವೃತ್ತ ವಿಜ್ಞಾನ ಶಿಕ್ಷಕ ಹಿರಿಯರಾದ ರತ್ನಾಕರ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ರಘು ಟಿ ವೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಶಿಕ್ಷಕ ಶಿವರಾಜ್ ಸ್ವಾಗತಿಸಿದರು, ಶಿಕ್ಷಕ ದಿಲೀಪ್ ವಂದಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್ ಭಟ್ ನಿರ್ವಹಿಸಿದರು.

