Sunday, June 14, 2026
spot_imgspot_img
spot_imgspot_img

ವಿಟ್ಲ: ಅಕ್ರಮವಾಗಿ ನಿಷೇದಿತ ಮಾದಕ ವಸ್ತು ಅಟೋರಿಕ್ಷಾವೊಂದರಲ್ಲಿ ಸಾಗಾಟ

- Advertisement -
- Advertisement -

ವಿಟ್ಲ: ಅಕ್ರಮವಾಗಿ ನಿಷೇದಿತ ಮಾದಕ ವಸ್ತು ಅಟೋರಿಕ್ಷಾವೊಂದರಲ್ಲಿ ಸಾಗಿಸುತ್ತಿದ್ದ ಚಾಲಕನನ್ನು ಬಂಧಿಸಿದ ಘಟನೆ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ನಡೆದಿದೆ.

KA-21-B-7248 ಅಟೋರಿಕ್ಷಾವೊಂದರಲ್ಲಿ ಅದರ ಚಾಲಕ ಆರೋಪಿ ಸುಳ್ಯ ಕಸಬಾ ಗ್ರಾಮ ಸುಳ್ಯ ನಿವಾಸಿಯಾದ ಎನ್‌ ಎಂ ಮಹಮ್ಮದ್‌ ಕಲಂದರ್‌ ಶಾ ಎಂಬಾತನು, ಯಾವುದೇ ಪರವಾನಿಗೆ ಇಲ್ಲದೇ ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾ ಸಾಗಿಸುತ್ತಿರುವುದನ್ನು ವಿಟ್ಲ ಠಾಣಾ ಪೊಲೀಸರು ಪತ್ತೆಹಚ್ಚಿದ್ದು,

ಆರೋಪಿಯನ್ನು ಹಾಗೂ ರಿಕ್ಷಾದಲ್ಲಿದ್ದ 6.110 ಕೆ ಜಿ ತೂಕದ ಗಾಂಜಾ ಅಂದಾಜು ಮೌಲ್ಯ 1,35,000/- ರೂಪಾಯಿ, ಎರಡು ಮೊಬೈಲ್‌ ಫೊನ್‌ (ಅಂದಾಜು ಮೌಲ್ಯ 1000/-ರೂ) ಹಾಗೂ 900/- ರೂಪಾಯಿ ನಗದು, ಚಾಲಕನ ಚಾಲನಾ ಪರವಾನಿಗೆ, 1,60,000/- ರೂ ಅಂದಾಜು ಮೌಲ್ಯದ ಅಟೋರಿಕ್ಷಾ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾದೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 2,96,900/- ರೂಪಾಯಿ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 162/2023 ಲಂ; 8(c),20(b) (ii) (B) ,NDPS ACT,ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!