




ಅಳಿಕೆ ಗ್ರಾಮದ ಜೆಡ್ಡು, ಶ್ರೀ ಆದಿ ಧನ್ವಂತರಿ ಕ್ಷೇತ್ರ ಪದ್ಮಗಿರಿಯಲ್ಲಿ ಅ. 29 ನೇ ಮಂಗಳವಾರದಂದು ಸಾಮೂಹಿಕ ಶ್ರೀ ಧನ್ವಂತರಿ ಪೂಜೆ ಹಾಗೂ ಶ್ರೀ ಧನ್ವಂತರಿ ಹವನ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 7.30 ಕ್ಕೆ ಶ್ರೀ ಗಣಪತಿ ಹವನ ನಡೆಯಲಿದೆ. ನಂತರ 9 ಗಂಟೆಯಿಂದ ಧನ್ವಂತರಿ ಹವನ ನಡೆದು ಬಳಿಕ 12.30 ಕ್ಕೆ ಶ್ರೀ ಧನ್ವಂತರಿ ದೇವರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಬೆಳಗ್ಗೆ 10.30 ಗಂಟೆಗೆ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರಘುರಾಮ ಕಾರಂತ ಪದ್ಯಾಣ, ನಿವೃತ್ತ ಪ್ರಧಾನ ಅರ್ಚಕರು ಶ್ರೀ ಪಶುಪತಿನಾಥ ದೇವಸ್ಥಾನ ಕಾಠ್ಮಂಡು, ನೇಪಾಳ ಇವರು ಉದ್ಘಾಟಿಸಿ, ಬಳಿಕ ಆರೋಗ್ಯ ರಕ್ಷಣೆಯಲ್ಲಿ ಶ್ರೀ ಧನ್ವಂತರಿ ಉಪಾಸನೆಯ ಮಹತ್ವ ವಿಷಯದ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ. ಜೆಡ್ಡು ನಾರಾಯಣ ಭಟ್, ಅಧ್ಯಕ್ಷರು ಜೆಡ್ಡು ಆಯುರ್ವೇದ ಸೇವಾ ಟ್ರಸ್ಟ್ (ರಿ) ಅಳಿಕೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು ವಿಧಾನ ಸಭಾ ಕ್ಷೇತ್ರ, ಡಾ| ಪದ್ಮಪ್ರಸಾದ ಅಜಿಲ ತಿಮ್ಮಣ್ಣನವರು, ವೇಣೂರು ಸೀಮೆ ಅಳದಂಗಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸೀತಾರಾಮ, ಶಾಂತಿ ವಿಹಾರ ಮನೆ, ನಾಟೆಕಲ್ಲು ಸಾಲೆತ್ತೂರು ಇವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ| ಅಹಲ್ಯಾ ಸರಸ್ವತಿ ಭಟ್ ಹಾಗೂ ಕು| ಅನಘಾ ಭಟ್, ಮಡಿಯಾಲ & ಮಿಹಿರ ಪಟವರ್ಧನ ಇವರ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವಿನೋದಾವಳಿ ಕಾರ್ಯಕ್ರಮ ನಡೆಯಲಿದೆ.