Tuesday, June 23, 2026
spot_imgspot_img
spot_imgspot_img

ಪವಿತ್ರ ಸ್ನಾನ ರದ್ದು ಮಾಡಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

- Advertisement -
- Advertisement -

ಪ್ರಯಾಗ್‌ರಾಜ್‌: ಕಾಲ್ತುಳಿತ ಸಂಭವಿಸಿದ ಹಿನ್ನೆಲೆಯಲ್ಲಿ ಇಂದಿನ ಪವಿತ್ರ ಸ್ನಾನವನ್ನು ರದ್ದು ಮಾಡಿಲ್ಲ, ಘಟನೆ ಸಂಭವಿಸಿದ ಬಳಿಕ ತುಸುಹೊತ್ತು ಸ್ಥಗಿತವಾಗಿತ್ತು, ಈಗ ಎಂದಿನಂತೆ ಮಹಾಕುಂಭಮೇಳೆ ನಡೆಯುತ್ತಿದೆ.

ಕುಂಭಮೇಳದಲ್ಲಿ ಅವಘಡಕ ಸಂಭವಿಸಿದ ವದಂತಿಗಳನ್ನು ನಂಬಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.ಸಂಗಮದ ಎಲ್ಲ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ. ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ, ಜನರು ಅವಸರ ಮಾಡಲು ಹೋಗಿ ತುಸು ಹೊತ್ತು ಗದ್ದಲ ಉಂಟಾಯಿತು. ಮಹಾಕುಂಭಮೇಳದಲ್ಲೇ ಸುಸಜ್ಜಿತ ಆಸ್ಪತ್ರೆ ಮತ್ತು ವೈದ್ಯಕೀಯ ಸೌಲಭ್ಯ ಇದೆ. ಎಷ್ಟೇ ಜನರಿದ್ದರೂ ಚಿಕಿತ್ಸೆಗೆ ಬೇಕಾದ ಅನುಕೂಲಗಳು ಇವೆ. ಕೆಲವರು ದುರುದ್ದೇಶದಿಂದ ವದಂತಿಗಳನ್ನು ಹರಿಯಬಿಡುತ್ತಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯೋಗಿ, ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ. ನಾನು ಸಾಧು ಸಂತರ ಜೊತೆಗೆ ಮಾತನಾಡಿದ್ದೇವೆ. ಮೊದಲು ಭಕ್ತರು ಪುಣ್ಯಸ್ನಾನ ಮಾಡಲಿ. ಆಮೇಲೆ ನಾವುಸ್ನಾನ ಮಾಡುವುದಾಗಿ ಸಾಧು ಸಂತರು, ಅಖಾಡಗಳ ಮುಖ್ಯಸ್ಥರು ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು ದೂರು ನಡೆಯಬೇಡಿ. ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರು ಅದು ಗಂಗಾ ನದಿಯ ನೀರು. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಸ್ತೋಮ ಇರುವ ಹಿನ್ನಲೆ ಜನರು ಸಂಯಮದಿಂದ ವರ್ತಿಸಿ ಎಂದು ಮನವಿ ಮಾಡಿದ್ದಾರೆ. ಆಡಳಿತದ ಸೂಚನೆಗಳನ್ನು ಅನುಸರಿಸಿ ಸಹಕರಿಸಬೇಕು. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಇಂದು ಮೌನಿ ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸ್ನಾನ ಮಾಡಲು ತ್ರೀವೇಣಿ ಸಂಗಮಕ್ಕೆ ಆಗಮಿಸಿದ್ದರು. ಈ ವೇಳೆ ಕೆಲವರು ಬ್ಯಾರಿಕೇಡ್ ಹಾರಿ ಪವಿತ್ರ ಸ್ನಾನಕ್ಕೆ ಮುನ್ನುಗಿದ್ದರಿಂದ ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತ ಸುದ್ದಿ ಪ್ರಕಟವಾಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಇಂದು ಮೂರು ಬಾರಿ ಕರೆ ಮಾಡಿ ಯೋಗಿ ಅದಿತ್ಯನಾಥ್ ಅವರಲ್ಲಿ ಮಾತನಾಡಿದ್ದಾರೆ.

- Advertisement -

Related news

error: Content is protected !!