



ಅಳಿಕೆ: ರಾಜೀವ್ ಗಾಂಧಿ ಯುವ ಶಕ್ತಿ ಸಂಘ (ರಿ.) ಅಳಿಕೆ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಸನ್ ಹಾಗೂ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಸನ್ ಇದರ ಸಹಭಾಗಿತ್ವದಲ್ಲಿ ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತುರವರ ಸಾರಥ್ಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ಏಪ್ರಿಲ್. 26-4-2025ನೇ ಶನಿವಾರ ಸಣ್ಣಗುತ್ತು ಕ್ರೀಡಾಂಗಣ ಅಳಿಕೆ ಇಲ್ಲಿ ನಡೆಯಲಿದೆ.

65 ಕೆ.ಜಿ ವಿಭಾಗದ ಪಂದ್ಯಾಟದ ಪ್ರವೇಶ ಶುಲ್ಕ: 700/- ವಿಜೇತ ತಂಡಗಳಿಗೆ ಪ್ರಥಮ: 11,111/- ಮತ್ತು ರಾಜೀವ್ ಗಾಂಧಿ ಟ್ರೋಫಿ, ದ್ವಿತೀಯ: 8,888/- ಮತ್ತು ರಾಜೀವ್ ಗಾಂಧಿ ಟ್ರೋಫಿ, ತೃತೀಯ: 5,555/- ಮತ್ತು ರಾಜೀವ್ ಗಾಂಧಿ ಟ್ರೋಫಿ, ಚತುರ್ಥ: 3,333/- ಮತ್ತು ರಾಜೀವ್ ಗಾಂಧಿ ಟ್ರೋಫಿ ನೀಡಲಾಗುವುದು.
ಗ್ರಾಮ ಸೀಮಿತ ವಿಭಾಗದ ಪಂದ್ಯಾಟದ ಪ್ರವೇಶ ಶುಲ್ಕ: 350/- ವಿಜೇತ ತಂಡಗಳಿಗೆ ಪ್ರಥಮ: 3,333/- ಮತ್ತು ರಾಜೀವ್ ಗಾಂಧಿ ಟ್ರೋಫಿ, ದ್ವಿತೀಯ: 1,555/- ಮತ್ತು ರಾಜೀವ್ ಗಾಂಧಿ ಟ್ರೋಫಿ ನೀಡಲಾಗುವುದು ಎಂದು ಪ್ರಕಟಣೆಲಯಲ್ಲಿ ತಿಳಿಸಿದ್ದಾರೆ.
ಶ್ರೇಷ್ಠ ದಾಳಿಗಾರ, ಶ್ರೇಷ್ಠ ಹಿಡಿತಗಾರ, ಪಂದ್ಯ ಶ್ರೇಷ್ಠ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು.
ವಿಶೇಷ ಸೂಚನೆಗಳು:
- ಗ್ರಾಮ ಸೀಮಿತಕ್ಕೆ ಮೊದಲು ನೋಂದಾಯಿಸಿದ 8 ತಂಡಗಳಿಗೆ ಮಾತ್ರ ಅವಕಾಶ
- ಗ್ರಾಮ ಸೀಮಿತಕ್ಕೆ ದಿನಾಂಕ 22-04-2025 ರ ಒಳಗೆ ನೋಂದಾಯಿಸಿದ ತಂಡಗಳಿಗೆ ಮಾತ್ರ ಅವಕಾಶ
- ಗ್ರಾಮ ಸೀಮಿತಕ್ಕೆ ಮೂಲ ಆಧಾರ್ ಕಾರ್ಡ್ ಕಡ್ಡಾಯ ತರತಕ್ಕದ್ದು
- ಗ್ರಾಮ ಸೀಮಿತ ಪಂದ್ಯಾಟವು ಸರಿಯಾಗಿ ಸಂಜೆ 6:00 ಗಂಟೆಗೆ ಪ್ರಾರಂಭಿಸಲಾಗುವುದು
- 65 ಕೆ.ಜಿ ವಿಭಾಗದ ಒಪನ್ ಸ್ಕೇಲ್
- ತೀರ್ಪುಗಾರರ ತೀರ್ಮಾನವೇ ಅಂತಿಮ
- ಅಶಿಸ್ತು ತೋರಿದ ತಂಡವನ್ನು ಪಂದ್ಯಾಕೂಟದಿಂದ ಕೈ ಬಿಡಲಾಗುವುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7996777459, 9740783733, 9632201796, 8867263019








