Friday, April 26, 2024
spot_imgspot_img
spot_imgspot_img

IPL 4ನೇ ಪಂದ್ಯಾಟ: ರಾಜಸ್ಥಾನ ರಾಯಲ್ಸ್ Vs ಪಂಜಾಬ್ ಕಿಂಗ್ಸ್!

- Advertisement -G L Acharya panikkar
- Advertisement -

ಐಪಿಎಲ್ 4ನೇ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಸೆಣೆಸಾಟಕ್ಕೆ ಇಳಿಯಲು ಸಜ್ಜಾಗಿದೆ. ಈ ಬಾರಿ ತಂಡದ ಹೆಸರನ್ನು ಬದಲಾಯಿಸಿಕೊಂಡು ಮೊಹಾಲಿ ಮೂಲದ ಫ್ರಾಂಚೈಸಿ ಕಣಕ್ಕಿಳಿಯುತ್ತಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಹೊಸ ನಾಯಕನ ನೇತೃತ್ವದಲ್ಲಿ ಈ ಬಾರಿ ಕಣಕ್ಕಿಳಿಯುತ್ತಿರುವುದು ಕುತೂಹಲ ಮೂಡಿಸಿದೆ.

ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ನಂತರ ರಾಜಸ್ಥಾನ್ ರಾಯಲ್ಸ್ ಮತ್ತೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಈ ಎರಡು ತಂಡಗಳ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ಸಣ್ಣ ಮೇಲುಗೈ ಸಾಧಿಸಿದೆ.

ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಈವರೆಗೆ 21 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ ರಾಯಲ್ಸ್ 12 ಬಾರಿ ಗೆದ್ದಿದೆ. ಪಂಜಾಬ್ ಕಿಂಗ್ಸ್ 9 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ. ಇತ್ತೀಚಿನ ಫಾರ್ಮ್ ಗಮನಿಸಿದರೆ ಕೂಡ ರಾಜಸ್ಥಾನ್ ರಾಯಲ್ಸ್ ಸಣ್ಣ ಮೇಲುಗೈ ಸಾಧಿಸಿದೆ. ಕಳೆದ ಐದು ಪಂದ್ಯಗಳಲ್ಲಿ ರಾಜಸ್ಥಾನ್ 3 ಪಂದ್ಯಗಳಲ್ಲಿ ಜಯಸಾಧಿಸಿದೆ. 2020 ಆವೃತ್ತಿಯ ಎರಡು ಪಂದ್ಯಗಳನ್ನೂ ರಾಜಸ್ಥಾನ್ ಗೆದ್ದುಕೊಂಡಿತ್ತು.

ಈ ಎರಡು ತಂಡಗಳ ಮುಖಾಮುಖಿಯಲ್ಲಿ ಪಂಜಾಬ್ ತಂಡದ ಪರವಾಗಿ 2008ರಿಂದ 2015ರವರೆಗೆ ಕಣಕ್ಕಿಳಿದಿದ್ದ ಶಾನ್ ಮಾರ್ಶ್ 409 ರನ್‌ಗಳಿಸಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಇದ್ದು 406 ರನ್‌ಗಳನ್ನು ಗಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಪಿಯೂಷ್ ಚಾವ್ಲಾ ಹೆಚ್ಚಿನ ಯಶಸ್ಸು ಗಳಿಸಿದ್ದಾರೆ. ಪಂಜಾಬ್ ತಂಡದ ಪರವಾಗಿ 2008ರಿಂದ 2013ರ ವರೆಗೆ ಕಣಕ್ಕಿಳಿದಿದ್ದ ಚಾವ್ಲಾ 14 ವಿಕೆಟ್ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ 11 ವಿಕೆಟ್ ಪಡೆದಿರುವ ಸಿದ್ಧಾರ್ಥ್ ತ್ರಿವೇದಿ ಇದ್ದಾರೆ.

- Advertisement -

Related news

error: Content is protected !!