Wednesday, July 2, 2025
spot_imgspot_img
spot_imgspot_img

ವಿಟ್ಲ: ಜಗಲಿಯಲ್ಲಿ ಮಣ್ಣು ಗುದ್ದುತ್ತಿರುವ ವೇಳೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ: ಜಗಲಿಯಲ್ಲಿ ಮಣ್ಣು ಗುದ್ದುತ್ತಿರುವ ವೇಳೆ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದಲ್ಲಿ ನಡೆದಿದೆ.

ರಾಮಣ್ಣ ಗೌಡ (65) ಮೃತ ವ್ಯಕ್ತಿ. ರಾಮಣ್ಣ ಗೌಡ ರವರು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಾನ ಈಶ್ವರ ಭಟ್ ರವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಮಾ. 9 ರಂದು ಎಂದಿನಂತೆ ರಾಮಣ್ಣ ಗೌಡರವರು ಈಶ್ವರ ಭಟ್ ರವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಕಾನ ಈಶ್ವರ ಭಟ್ ರವರು ಮೃತರ ಪತ್ನಿಯ ತಮ್ಮನಾದ ಗುರುವಪ್ಪ ಗೌಡರಿಗೆ ದೂರವಾಣಿ ಕರೆ ಮಾಡಿ ರಾಮಣ್ಣ ಗೌಡರವರು ಜಗಲಿಯಲ್ಲಿ ಮಣ್ಣನ್ನು ಗುದ್ದುತ್ತಿರುವ ಸಮಯ ಆಕಸ್ಮಿಕವಾಗಿ ಬಿದ್ದು ಸೃತ್ತಿ ತಪ್ಪಿ ಮಾತನಾಡುವ ಸ್ಥಿಯಲ್ಲಿ ಇಲ್ಲವೆಂದು, ಅವರನ್ನು ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು.

ಗುರುವಪ್ಪರವರು ಅವರ ಜೊತೆಯಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಗೆ ಬಂದಾಗ, ವೈದ್ಯರು ಪರೀಕ್ಷಿಸಿ ರಾಮಣ್ಣ ಗೌಡರವರು ಮೃತಪಟ್ಟಿರುರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗುರುವಪ್ಪ ಗೌಡರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!