- Advertisement -
- Advertisement -
ಅಳಿಕೆ: ಶ್ರೀ ವಿಷ್ಣುಮಂಗಲ ಸೇವಾ ಸಮಿತಿ ಎರುಂಬು ಇದರ 2021-22 ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಮಿತಿಯ ಗೌರವಧ್ಯಕ್ಷ ಬಾಲಕೃಷ್ಣ ಕಾರಂತರ ನೇತೃತ್ವದಲ್ಲಿ ಮಾಡಲಾಯಿತು.

ಹಿರಿಯ ಸಾಮಾಜಿಕ ಕಾರ್ಯಕರ್ತ ವಸಂತ ಕುಲಾಲ್ ನೆಲ್ಲಿಮಾರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಲೋಕನಾಥ್ ರೈ, ದಿವ್ಯ ಧನುಷ್ ರೈ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಜತೆಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್, ಕೋಶಾಧಿಕಾರಿಯಾಗಿ ರಂಜಿತ್ ಕುಲಾಲ್, ಜತೆ ಕೋಶಾಧಿಕಾರಿಯಾಗಿ ಹಾರ್ದಿಕ್ ರೈ, ಉಸ್ತುವಾರಿ ಕೃಷ್ಣ ವರ್ಮಾ ಪಾಂಡಾಜೆ, ಭಜನಾ ಸಂಚಾಲಕಯಾಗಿ ವಿನೋದ್ ಕುಲಾಲ್, ದೇವಸ್ಥಾನದ ನಿರ್ವಹಣೆ ವರದರಾಜ್ ಮತ್ತು ವಿಠಲಯ್ಯ ಬಲ್ಲಾಳ್ ಇವರು ಆಯ್ಕೆಗೊಂಡರು.

ಸಲಹಾ ಸಮಿತಿ ಮೋಹನದಾಸ ರೈ, ರಾಮಚಂದ್ರ ಬಲ್ಲಾಳ, ಚಂದ್ರಶೇಖರ ಆಚಾರ್ಯ, ಮಧುಸೂದನ್ ರೈ, ರಾಧಾಕೃಷ್ಣ ಕುಲಾಲ್, ಕೇಶವ ಕುಲಾಲ್, ನವೀನ್ ಕುಲಾಲ್, ಲೋಕೇಶ್ ಕುಲಾಲ್, ರವಿಶಂಕರ್ ಬಲ್ಲಾಳ, ಸಂತೋಷ್ ಕುಂದರ್, ಜಯರಾಮ ನಾಯ್ಕ್, ಕೀರ್ತಿ ಕುಲಾಲ್ ಸೇರಿದ್ದರು.

- Advertisement -