




ಅಳಿಕೆ: ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ. ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ 142 ವಿದ್ಯಾರ್ಥಿಗಳಲ್ಲಿ 127 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ವಾಣಿಜ್ಯ ವಿಭಾಗಗಳಲ್ಲಿ 55 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ. 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ವಿಭಾಗದಲ್ಲಿ ಹಾಜರಾದ 15 ವಿದ್ಯಾರ್ಥಿಗಳಲ್ಲಿ 2 ವಿಶಿಷ್ಟ ಶ್ರೇಣಿ, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 87 ಫಲಿತಾಂಶ ದಾಖಲಾಗಿರುತ್ತದೆ.

ವಿಜ್ಞಾನ ವಿಭಾಗ
1.ಶಿವಸಾಗರ ಹಲನ್ನವರ್-596 ಪ್ರಥಮ
2.ಕಾರ್ತಿಕ್ ಮಹೇಶ್ ಬಡಿಗೇರ್-596 ಪ್ರಥಮ
3.ಕಾರ್ತಿಕ್ ಎ-592 ದ್ವಿತೀಯ
4ಕನಿಷ್ಕ ಯಂ ಹೊನ್ನವಾರ್ಕರ್- 591 ತೃತೀಯ
ವಾಣಿಜ್ಯ ವಿಭಾಗ
1.ಜೈದೀಪ್ ಕಣ್ಣತೀರ್ಥ-595 ಪ್ರಥಮ
2.ವೈಶಾಕ್ ಬಿ- 594 ದ್ವಿತೀಯ
3.ಸಾಯಿಲೋಚನ್ ಎನ್-590 ತೃತೀಯ
ಕಲಾ ವಿಭಾಗ
1.ಸುಹಾನ್ ಪುಂಡಲೀಕ್ ಯಂ -556 ಪ್ರಥಮ
2.ತನ್ಮಯ್-538 ದ್ವಿತೀಯ
3.ದರ್ಶನ್ ಉಮೇಶಗೌಡ ಯಂ-476 ತೃತೀಯ
ಸಂಸ್ಕೃತದಲ್ಲಿ 100 ರಲ್ಲಿ 100 ಅಂಕ 38 ವಿದ್ಯಾರ್ಥಿಗಳು .
ಗಣಿತಶಾಸ್ತ್ರದಲ್ಲಿ 100ರಲ್ಲಿ 100 ಅಂಕ 22 ವಿದ್ಯಾರ್ಥಿಗಳು.
ಗಣಕ ವಿಜ್ಞಾನದಲ್ಲಿ 100ರಲ್ಲಿ 100 ಅಂಕ 13 ವಿದ್ಯಾರ್ಥಿಗಳು .
ಮೂಲ ಗಣಿತದಲ್ಲಿ 100ರಲ್ಲಿ 100 ಅಂಕ 10 ವಿದ್ಯಾರ್ಥಿಗಳು
ವ್ಯವಹಾರ ಅಧ್ಯಯನದಲ್ಲಿ 100ರಲ್ಲಿ 100 ಅಂಕ 9 ವಿದ್ಯಾರ್ಥಿಗಳು .
ಭೌತ ಶಾಸ್ತ್ರದಲ್ಲಿ 100ರಲ್ಲಿ 100 ಅಂಕ 7 ವಿದ್ಯಾರ್ಥಿಗಳು.
ಲೆಕ್ಕಶಾಸ್ತ್ರದಲ್ಲಿ 100ರಲ್ಲಿ 100 ಅಂಕ 7 ವಿದ್ಯಾರ್ಥಿಗಳು.
ಜೀವಶಾಸ್ತ್ರದಲ್ಲಿ 100ರಲ್ಲಿ 100 ಅಂಕ 5 ವಿದ್ಯಾರ್ಥಿಗಳು.
ಕನ್ನಡದಲ್ಲಿ 100ರಲ್ಲಿ 100 ಅಂಕ 4 ವಿದ್ಯಾರ್ಥಿಗಳು.
ರಸಾಯನಶಾಸ್ತ್ರದಲ್ಲಿ 100ರಲ್ಲಿ 100 ಅಂಕ 3 ವಿದ್ಯಾರ್ಥಿಗಳು .
ಅರ್ಥಶಾಸ್ತ್ರದಲ್ಲಿ 100ರಲ್ಲಿ 100 ಅಂಕ 2 ವಿದ್ಯಾರ್ಥಿಗಳು ಹಾಗೂ
ಸಂಖ್ಯಾಶಾಸ್ತ್ರದಲ್ಲಿ 100ರಲ್ಲಿ 100 ಅಂಕ 2 ವಿದ್ಯಾರ್ಥಿಗಳು ಪಡೆದಿರುತ್ತಾರೆ.








