Tuesday, July 28, 2026
spot_imgspot_img
spot_imgspot_img

ಮಂಗಳೂರು ಕುಖ್ಯಾತ ಕ್ರಿಮಿನಲ್ ಟಾರ್ಗೆಟ್ ಇಲ್ಯಾಸ್ ನ ಸಹಚರ ಅಲ್ತಾಫ್ ವಿದೇಶದಲ್ಲಿ ಸಾವು…!!*

- Advertisement -
- Advertisement -

ಬಿಜೆಪಿಯ ಮುಸ್ಲಿಂ ಮುಖಂಡರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಗೆ ಒಳಪಟ್ಟ ನಂತರ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದ ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಸಹಚರ ಅಲ್ತಾಫ್ ಉಳ್ಳಾಲ್ ದುಬೈಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ‌ ಎನ್ನಲಾಗಿದೆ.

ಖಡಕ್ ಅಧಿಕಾರಿ ಸುರೇಶ್ ಅವರು ಕಮೀಷನರ್ ಆಗಿದ್ದ ಕಾಲದಲ್ಲಿ ಮಂಗಳೂರಿನ ಹಲವು ಪೋಲಿಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಕೇಸ್ ಹಾಕಿಸಿಕೊಂಡಿದ್ದ ಅಲ್ತಾಫ್ ಪೋಲಿಸರ ಕೆಂಗಣ್ಣಿಗೆ ಗುರಿಯಾಗಿದ್ದ.‌ ಬಿಜೆಪಿ ಮುಖಂಡನಾಗಿದ್ದ ಮುಕ್ಕಾಚ್ಚೇರಿಯ ಜುಬೇದ್ ನ ಕೊಲೆ ಮಾಡಿದ ನಂತರ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದ. ಕೊಲೆ ಪ್ರಕರಣ, ಕೊಲೆ ಯತ್ನ ಅಲ್ಲದೇ ಕೋಮು ಗಲಭೆಗೆ ಪ್ರಚೋದನೆಯ ಕಾರಣಕ್ಕಾಗಿ ಈತನ ಮೇಲೆ ಇನ್ಸ್‌ಪೆಕ್ಟರ್ ಭಾರತಿ ಅವರಿಂದ ಗೂಂಡಾ ಕಾಯ್ದೆ ಜಾರಿಯಾಗಿತ್ತು ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!