Friday, June 19, 2026
spot_imgspot_img
spot_imgspot_img

ಎಂ.ಎಸ್.ಧೋನಿ ಯಾವಾಗಲೂ ನನ್ನ ನಾಯಕ ಎಂದ ವಿರಾಟ್ ಕೊಹ್ಲಿ

- Advertisement -
- Advertisement -

ನವದೆಹಲಿ: ಎಂಎಸ್ ಧೋನಿ ನೀವು ಯಾವಾಗಲೂ ನನ್ನ ನಾಯಕರಾಗಿ ಇರುತ್ತೀರಿ ಎಂದು  ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ಕಿರು ವಿಡಿಯೋದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ‘ಜೀವನದಲ್ಲಿ ಕೆಲವೊಮ್ಮೆ ಪದಗಳಿಗೆ ಕೊರತೆ ಉಂಟಾಗುತ್ತದೆ. ಇದು ಅಂಥದ್ದೇ ಒಂದು ಕ್ಷಣವಾಗಿದೆ. ನೀವು ಯಾವಾಗಲೂ ತಂಡದ ಬಸ್‌ನಲ್ಲಿ ಕೊನೆಯ ಸೀಟಿನಲ್ಲಿ ಕುಳಿತುಕೊಳ್ಳುವಂಥ ಸರಳ ವ್ಯಕ್ತಿಯೇ ಆಗಿರುತ್ತೀರಿ’ ಎಂದು ಹೇಳಿದ್ದಾರೆ.

‘ನಾವಿಬ್ಬರೂ ಶ್ರೇಷ್ಠವಾದ ನಂಬಿಕೆ, ಸ್ನೇಹ ಹೊಂದಿದ್ದೆವು ಮತ್ತು ಪರಸ್ಪರ ಅರ್ಥಮಾಡಿಕೊಂಡಿದ್ದೆವು. ಯಾಕೆಂದರೆ ನಾವಿಬ್ಬರೂ ಒಂದೇ ರೀತಿಯ ಪಾತ್ರ ನಿಭಾಯಿಸಿದ್ದೆವು ಮತ್ತು ಒಂದೇ ಗುರಿ ಹೊಂದಿದ್ದೆವು. ಅದುವೇ ತಂಡವನ್ನು ಗೆಲ್ಲಿಸುವುದು. ನಿಮ್ಮ ನಾಯಕತ್ವದಡಿಯಲ್ಲಿ ಮತ್ತು ನಿಮ್ಮೊಂದಿಗೆ ಆಡಿರುವುದು ನನ್ನ ಭಾಗ್ಯ. ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದಿರಿ ಮತ್ತು ಅದಕ್ಕಾಗಿ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ನಾನು ಈ ಹಿಂದೆಯೂ ಇದನ್ನು ಹೇಳಿದ್ದೆ ಮತ್ತು ಈಗಲೂ ಮತ್ತೊಮ್ಮೆ ಹೇಳುತ್ತೇನೆ, ನೀವು ಯಾವಾಗಲೂ ನನ್ನ ನಾಯಕರಾಗಿರುತ್ತೀರಿ’ ಎಂದು ಕೊಹ್ಲಿ ಹೇಳಿದ್ದಾರೆ.

- Advertisement -

Related news

error: Content is protected !!