Thursday, May 2, 2024
spot_imgspot_img
spot_imgspot_img

ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಲು ಅದ್ಭುತ ಟಿಪ್ಸ್

- Advertisement -G L Acharya panikkar
- Advertisement -

ಮಳೆಗಾಲದ ನಂತರ ಚಳಿಗಾಲದ ವಾತಾವರಣ ಬದಲಾಗುವ ಹಾಗೆ ಪುರುಷರ ದಟ್ಟವಾದ ತಲೆಕೂದಲು ಉದುರುವ ಅನುಭವ ಉಂಟಾಗುತ್ತದೆ.ಅದನ್ನು ತಡೆಯುವ ಟಿಪ್ಸ್ ಇಲ್ಲಿವೆ.

ಚಳಿಗಾಲದಲ್ಲಿ ಬೀಸುವ ತಣ್ಣನೆಯ ಗಾಳಿ ನೆತ್ತಿಯ ಭಾಗವನ್ನು ಒಣಗು ವಂತೆ ಮಾಡುತ್ತದೆ. ಇದರಿಂದ ತಲೆ ಕೂದಲು ಉದುರುವ ಸಮಸ್ಯೆ ಜಾಸ್ತಿ ಆಗುತ್ತದೆ. ಇಂತಹ ಸಮಸ್ಯೆಯಿಂದ ಪಾರಾಗಲು ಚಳಿಗಾಲದಲ್ಲಿ ತೆಂಗಿನ ಎಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆಯಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡುವುದು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ ಎಂದು ಹೇಳು ತ್ತಾರೆ. ತೆಂಗಿನ ಎಣ್ಣೆ ಹಚ್ಚಿ ಅರ್ಧ ಗಂಟೆ ಹಾಗೆ ಬಿಟ್ಟು ಆನಂತರ ಶಂಪೂ ಹಾಕಿ ತಲೆ ತೊಳೆದುಕೊಳ್ಳಿ.

ಚಳಿಗಾಲದಲ್ಲಿ ಮೊದಲೇ ನಿಮ್ಮ ತಲೆ ಕೂದಲು ಒಣಗಿರುತ್ತದೆ. ನೀವು ಪದೇ ಪದೇ ಶಾಂಪೂ ಹಾಕಿ ಸ್ನಾನ ಮಾಡುವುದರಿಂದ ತಲೆ ಕೂದಲು ತನ್ನ ನೈಸರ್ಗಿಕ ಎಣ್ಣೆಯ ಅಂಶವನ್ನು ಕಳೆದುಕೊಂಡು ಬಿಡುತ್ತದೆ.
ಆ ಸಂದರ್ಭದಲ್ಲಿ ತಲೆ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಹಾಗಾಗಿ ಪದೇ ಪದೇ ತಲೆ ಸ್ನಾನ ಮಾಡುವ ಅಭ್ಯಾಸವನ್ನು ಚಳಿ ಗಾಲದಲ್ಲಿ ಆದಷ್ಟು ಕಡಿಮೆ ಮಾಡಿಕೊಳ್ಳಿ.

ಶಾಂಪೂನಲ್ಲಿ ಇರುವಂತಹ ಹಾನಿಕಾರಕ ರಾಸಾಯನಿಕ ಅಂಶಗಳು ತಲೆ ಕೂದಲು ಉದುರುವ ಹಾಗೆ ಮಾಡುತ್ತವೆ ಮತ್ತು ತಲೆ ಹೊಟ್ಟು ಬರುವಂತೆ ಕೂಡ ಮಾಡುತ್ತವೆ. ವಿಶೇಷವಾಗಿ ನೆತ್ತಿಯ ಭಾಗದಲ್ಲಿ ಹೆಚ್ಚು ಕೆರೆತ ಉಂಟಾಗಲು ಇದೇ ಕಾರಣವಾಗಿರುತ್ತದೆ. ನೈಸರ್ಗಿಕವಾದ ಸೀಗೆಕಾಯಿ ಬಳಸಿ ಸ್ನಾನ ಮಾಡ ಬಹುದು. ಒಂದು ವೇಳೆ ಶಾಂಪೂ ಬಳಸುವುದಾದರೆ ಸಲ್ಫೇಟ್ ರಹಿತವಾದ ಶಾಂಪೂ ಬಳಸಿ.​

ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ವಿಶೇಷವಾಗಿ ಈಗಿನ ಚಳಿಗಾಲದಲ್ಲಿ ನಿಮ್ಮ ತಲೆ ಕೂದಲಿನ ರಕ್ಷಣೆ ಮಾಡಿಕೊಂಡು ಹೋಗು ವುದು ಒಳ್ಳೆಯದು.
ತಲೆಗೆ ಟೋಪಿ ಹಾಕಿಕೊಳ್ಳುವುದು, ಕೂದಲು ಕವರ್ ಆಗುವಂತೆ ಶಾಲ್ ಹೊದ್ದುಕೊಳ್ಳುವುದು ಹೀಗೆ. ತಲೆ ಕೂದಲಿನ ರಕ್ಷಣೆ ಮಾಡಿ ಕೊಂಡು ಹೊರಗೆ ಹೋಗುವುದರಿಂದ ಚಳಿಗಾಳಿಯ ಪ್ರಭಾವ ತಲೆ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ.​

ನಿಮ್ಮ ತಲೆ ಕೂದಲಿನ ರಕ್ಷಣೆಗೆ ಚಳಿಗಾಲದಲ್ಲಿ ತಲೆ ಕೂದಲು ಉದುರದಂತೆ ನೀವೇ ಸ್ವತಃ ಒಂದು ನೈಸರ್ಗಿಕವಾದ ಹೇರ್ ಮಾಸ್ಕ್ ತಯಾರಿಸಿಕೊಳ್ಳಿ. ಇದನ್ನು ಬಹಳ ಸುಲಭವಾಗಿ ತಯಾರಿಸಿಕೊಳ್ಳ ಬಹುದು.
ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಎಂದರೆ ತೆಂಗಿನ ಎಣ್ಣೆ, ಅಲೋವೆರಾ ಜೆಲ್ ಮತ್ತು ಕೋಳಿ ಮೊಟ್ಟೆಯ ಬಿಳಿ ಭಾಗ. ಈ ಮೂರನ್ನು ಮಿಕ್ಸರ್ ಜಾರ್ ನಲ್ಲಿ ಬ್ಲೆಂಡ್ ಮಾಡಿ ಆನಂತರ ತಲೆಗೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತಲೆ ಸ್ನಾನ ಮಾಡಿ.​

- Advertisement -

Related news

error: Content is protected !!