Monday, July 7, 2025
spot_imgspot_img
spot_imgspot_img

ಗುಡಿಯಲ್ಲಿ ಅಮರನಾದ ‘ಅಮರ್ ನಾಥ್ ‘

- Advertisement -
- Advertisement -

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ತಮ್ಮ ಆರಾಧ್ಯ ದೈವ ಅಂಬಿಗಾಗಿ, ಅಭಿಮಾನಿಗಳು ದೇವಸ್ಥಾನ ಕಟ್ಟಿಸಿದ್ದಾರೆ. ಎಂಟು ಲಕ್ಷ ರೂಪಾಯಿ ಖರ್ಚು ಮಾಡಿ, ದೇವಸ್ಥಾನದಲ್ಲಿ ಕಂಚಿನ ಪ್ರತಿಮೆಯೊಂದನ್ನ ನಿರ್ಮಾಣ ಮಾಡಿದ್ದಾರೆ.

ಇದೇ ತಿಂಗಳ 24ನೇ ತಾರೀಖಿನಂದು, ನಟಿ, ಸಂಸದೆ ಸುಮಲತಾ ಅಂಬರೀಶ್​ ಈ ಪ್ರತಿಮೆಯನ್ನ ಉದ್ಘಾಟನೆ ಮಾಡಲಿದ್ದಾರೆ.ಅಂಬಿ, ಅಭಿಮಾನಿಗಳನ್ನ ಅಗಲಿ 2 ವರ್ಷಗಳಾದ್ರೂ, ಮಂಡ್ಯದ ಗಂಡಿನ ಮೇಲಿನ ಅಭಿಮಾನ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. ಅಂಬರೀಶ್​ ಬದುಕಿದ್ದಾಗ, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನ ಗ್ರಾಮದ ಹಬ್ಬದಂತೆ ಆಚರಿಸುತ್ತಿದ್ದರು. ಈಗ ಅವರ ನೆನಪಿನಲ್ಲಿ ಗುಡಿ ನಿರ್ಮಿಸಿ ಅಂಬಿಯನ್ನ ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಅಲ್ಲದೇ ಈ ಗುಡಿಗೆ ಅಂಬಿ ಅಮರ ಎಂದು ಹೆಸರಿಟ್ಟಿದ್ದಾರೆ.

ವಿಶೇಷ ಅಂದರೆ ಅಂಬಿ ಚಿತಾಭಸ್ಮವನ್ನು ತಂದು ಅಂಬಿ ಪುತ್ಥಳಿ ಸ್ಥಳದಲ್ಲಿ ಹಾಕಿದ್ದಾರೆ. 2018ರ, ನವೆಂಬರ್​ 24ರಂದು, ಅನಾರೋಗ್ಯದಿಂದ ರೆಬಲ್​ ಸ್ಟಾರ್​ ಅಂಬರೀಶ್​ ನಿಧನರಾಗಿದ್ರು. ಈಗ ಅಂಬಿ ನೆನಪಿನಲ್ಲಿ ಹೊಟ್ಟೆಗೌಡನ ದೊಡ್ಡಿ ಗ್ರಾಮದವ್ರು, ಅವರು ನಿಧನರಾದ ದಿನದಂದೇ ಅಂಬಿ ದೇವಸ್ಥಾನವನ್ನ ಉದ್ಘಾಟಿಸಲು ನಿರ್ಧರಿಸಿದ್ದಾರೆ.

- Advertisement -

Related news

error: Content is protected !!