Sunday, June 14, 2026
spot_imgspot_img
spot_imgspot_img

ಪಾಕಿಸ್ತಾನದಲ್ಲಿ ಕೇಕ್ ಕತ್ತರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಭಾರತದ ಅಂಜು

- Advertisement -
- Advertisement -

ಪಾಕಿಸ್ತಾನಕ್ಕೆ ತನ್ನ ಫೇಸ್‌ ಬುಕ್‌ ಗೆಳೆಯನನ್ನು ಭೇಟಿಯಾಗಲು ಹೋಗಿರುವ ರಾಜಸ್ಥಾನದ ವಿವಾಹಿತ ಮಹಿಳೆ ಅಂಜು ಇದೀಗ ಪಾಕ್ ಗೆಳೆಯ ನಸ್ರುಲ್ಲಾನೊಂದಿಗೆ ಕೇಕ್ ಕತ್ತರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದ್ದಾಳೆ.

ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಅಂಜು, ನಸ್ರುಲ್ಲಾ‌ ಹಾಗೂ ಪಾಕ್‌ ನ ಕೆಲ ಜನರ ಗುಂಪಿನೊಂದಿಗೆ ಸೇರಿಕೊಂಡು ಕೇಕ್ ಕತ್ತರಿಸಿ, ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇನ್ನು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಫೇಸ್‌ ಬುಕ್‌ ನಲ್ಲಿ ಪರಿಚಯವಾದ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕ್‌ ಗೆ ತಲುಪಿದ್ದು, ಆಕೆ ಪ್ರಯಾಣದ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಪಾಕಿಸ್ತಾನಕ್ಕೆ ತಲುಪಿದ್ದಾಳೆ. ಅಂಜು ವಾಟ್ಸಾಪ್‌ ಮೂಲಕ ಕರೆ ಮಾಡಿ ನಾನು ಲಾಹೋರ್‌ ನಲ್ಲಿದ್ದೇನೆ. 3-4 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್‌ ತಿಳಿಸಿದ್ದರು.

ನಸ್ರುಲ್ಲಾ ಹಾಗೂ ನಾನು ಒಳ್ಳೆಯ ಸ್ನೇಹಿತರು. ನಾನು ಪಾಕ್‌ ಸುತ್ತಾಡಲು ಬಂದಿದ್ದೇನೆ. ಶೀಘ್ರದಲ್ಲಿ ವೀಸಾ ಅವಧಿ ಮುಗಿದ ಬಳಿಕ ಭಾರತಕ್ಕೆ ಬರುವುದಾಗಿ ಅಂಜು ಹೇಳಿದ್ದು, ಇದಾದ ಬಳಿಕ ಅಂಜು ಇಸ್ಲಾಂ ಧರ್ಮಕ್ಕೆ‌ ಮತಾಂತರವಾಗಿ ನಸ್ರುಲ್ಲಾ ಅವರ ಜೊತೆ ವಿವಾಹವಾಗಿದ್ದಾರೆ ಎನ್ನುವ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಇದು ಸುಳ್ಳೆಂದು ನಸ್ರುಲ್ಲಾ ಹಾಗೂ ಅಂಜು ಹೇಳಿದ್ದರು. ಇದೀಗ ಪಾಕಿಸ್ತಾನದ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

- Advertisement -

Related news

error: Content is protected !!