Friday, April 26, 2024
spot_imgspot_img
spot_imgspot_img

ಇಂದು ರಾತ್ರಿ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣ ವಚನ ಸ್ವೀಕಾರ

- Advertisement -G L Acharya panikkar
- Advertisement -

ವಾಷಿಂಗ್ಟನ್: ಬಿಗಿಭದ್ರತೆ ನಡುವೆ ಸಂಸತ್ತಿನಲ್ಲಿ ಇಂದು ರಾತ್ರಿ 10.30ಕ್ಕೆ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಶೇಷ ಅಂದ್ರೆ 127 ವರ್ಷದ ಹಳೆದಾದ ಕುಟುಂಬದ ಬೈಬಲ್ ಮೇಲೆ ಬೈಡನ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಮೆರಿಕ ಕ್ಯಾಪಿಟಲ್ ಹಿಲ್‍ನ ಪಶ್ಚಿಮ ದ್ವಾರದ ಬಳಿ ಸಂಪೂರ್ಣ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಿ ನಡೆಸಲಾಗಿದೆ. ಅಮೆರಿಕದ ರಾಜಕೀಯದಲ್ಲಿ ಭಾರತದ ಪಾತ್ರ ಬಹುದೊಡ್ಡದು. 49ನೇ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಭಾರತ ಮೂಲದ ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಗರಿಮೆಗೆ ಕಮಲಾ ಪಾತ್ರರಾಗಲಿದ್ದಾರೆ. ತಮಿಳುನಾಡಿನ ತಿರುವರೂರ್ ಸಮೀಪದ ಹಳ್ಳಿ ಕಮಲಾ ಅವರ ತಂದೆ ಊರಾಗಿದೆ.

ಬೈಡನ್ ಪದಗ್ರಹಣ ಕಾರ್ಯಕ್ರಮಕ್ಕೆ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾಗಿಯಾಗುತ್ತಿಲ್ಲ. ಇಂದು ಶ್ವೇತಭವನದಿಂದ ಡೋನಾಲ್ಡ್ ಟ್ರಂಪ್ ನಿರ್ಗಮಿಸಲಿದ್ದಾರೆ. ಇದೇ ವೇಳೆ ಪ್ರಥಮ ಮಹಿಳೆ ಮಿಲೆನಿಯಾ ಟ್ರಂಪ್ ವಿದಾಯ ಭಾಷಣ ಕುತೂಹಲಕ್ಕೆ ಕಾರಣವಾಯ್ತು. ಶ್ವೇತಭವನದಿಂದ ಟ್ರಂಪ್ ಹೊರಡಲು ಎಲ್ಲಾ ಸಿದ್ಧತೆಯಾಗಿದೆ. ಕಳೆದ ನಾಲ್ಕು ವರ್ಷಗಳು ಮರೆಯಲಾರದ ಕ್ಷಣಗಳಾಗಿದೆ. ಟ್ರಂಪ್, ನಾನು ಶ್ವೇತಭವನದ ಸಮಯ ಮುಕ್ತಾಯಗೊಳಿಸಿದ್ದೇವೆ ಎಂದು ಸುಮಾರು 7 ನಿಮಿಷಗಳ ಭಾಷಣದಲ್ಲಿ ತಿಳಿಸಿದ್ರು. ಆದ್ರೆ ನೂತನ ಅಧ್ಯಕ್ಷರಿಗೆ ಸ್ವಾಗತ ಕೋರದೇ ಇರುವುದು ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ಕ್ಯಾಪಿಟಲ್ ಮೇಲಿನ ಕಂಡುಕೇಳರಿಯದ ದಾಳಿಯಿಂದ ಮುಂಜಾಗ್ರತೆಯಾಗಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಮಿಚಿಗನ್, ವರ್ಜಿನಿಯಾ, ವಾಷಿಂಗ್ಟನ್ ಸೇರಿದಂತೆ ದೇಶದ 50ಕ್ಕೂ ಹೆಚ್ಚು ಕಡೆ ಪ್ರತಿಭಟನೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಲಾಗಿದೆ. ಕ್ಯಾಪಿಟಲ್ ಸುತ್ತಮುತ್ತ 25 ಸಾವಿರಕ್ಕೂ ಹೆಚ್ಚು ಶಸ್ತ್ರಸಜ್ಜಿತ ಭದ್ರತಾಪಡೆಗಳ ನಿಯೋಜನೆ ಮಾಡಲಾಗಿದೆ.

- Advertisement -

Related news

error: Content is protected !!