Friday, April 26, 2024
spot_imgspot_img
spot_imgspot_img

ಏಮ್ಸ್ ಪ್ರವೇಶ ಪರೀಕ್ಷೆ: ವಿಜಯಪುರ ವಿದ್ಯಾರ್ಥಿನಿ ದೇಶಕ್ಕೇ ಪ್ರಥಮ

- Advertisement -G L Acharya panikkar
- Advertisement -

ವಿಜಯಪುರ: ದೆಹಲಿಯ ಏಮ್ಸ್ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜಯಪುರದ ದಿವ್ಯಾ ಅರವಿಂದ ಹಿರೊಳ್ಳಿ ಡಿಎಂ ಜನರಲ್ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಏಮ್ಸ್ ನವೆಂಬರ್ 20ರಂದು ಪರೀಕ್ಷೆ ನಡೆಸಿದ್ದು ದಿವ್ಯಾ ಶೇ.67.08 ಅಂಕಗಳೊಂದಿಗೆ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ದಿವ್ಯಾ ವಿಜಯಪುರದ ಸೆಷನ್ಸ್ ಕೋರ್ಟ್ ನಲ್ಲಿ ಹಿರಿಯ ವಕೀಲರಾಗಿರಿವ ಅರವಿಂದ ಹಿರೊಳ್ಳಿ ಅವರ ಪುತ್ರಿ. ಬಿಎಲ್ ಡಿಇ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಡಿ, ಪಾಂಡಿವೇರಿಯ ಜಿಪ್ ಮೇರ್ (JIPMER) ನಲ್ಲಿ ಫೆಲೋಷಿಪ್ ಇನ್ ಕ್ರಿಟಿಕಲ್ ಕೇರ್ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಫೆಲೋಷಿಪ್ ಇನ್ ನ್ಯೂರೋ ಕ್ರಿಟಿಕಲ್ ಕೇರ್ ವ್ಯಾಸಂಗ ಮಾಡಿದ್ದಾರೆ.

- Advertisement -

Related news

error: Content is protected !!