Tuesday, May 7, 2024
spot_imgspot_img
spot_imgspot_img

ತೆಂಗಿನಕಾಯಿ ಹೂ (coconut apple) ತಿಂದು 15 ಮಂದಿ ಅಸ್ವಸ್ತ..! ತಾಪಮಾನ ಏರಿಕೆ ಕಾರಣವಾಯಿತೇ..?

- Advertisement -G L Acharya panikkar
- Advertisement -

ತೆಂಗಿನಕಾಯಿ ಬೊಂಡು/ಹೂ (coconut apple) ತಿಂದು 15 ಮಂದಿ ಅಸ್ವಸ್ತರಾದ ಘಟನೆ ನಡೆದಿದೆ. ಮಲಪ್ಪುರಂನ ಎಡರಿಕೋಡು ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತೆಂಗಿನ ಬೊಂಡು ತಿಂದು ಐದೂವರೆ ವರ್ಷದ ಬಾಲಕ ಸೇರಿದಂತೆ 15 ಮಂದಿ ಅಸ್ವಸ್ತರಾಗಿದ್ದಾರೆ.

ಆರು ಮಂದಿ ಕೊಟ್ಟಕ್ಕಲ್ ಮತ್ತು ಎಡರಿಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಪ್ರಾಥಮಿಕ ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ ಎಂದು ಕೇರಳದ ಮಾಧ್ಯಮ ಮೂಲಗಳು ತಿಳಿಸಿದೆ.

ಮಲಪ್ಪುರಂನಿಂದ ಸಂಬಂಧಿಕರು ತಂದಿದ್ದ ತೆಂಗಿನ ಹೂ ಅನ್ನು ತಿನ್ನುತ್ತಿದ್ದರು. ತಿಂದ ನಂತರ ಭೇದಿ ಮತ್ತು ವಾಂತಿಯಾಗಿ ಆಸ್ಪತ್ರೆಗೆ ಬಂದಾಗಲೇ ಅವರಿಗೆ ಫುಡ್ ಪಾಯ್ಸನ್ ಆಗಿರುವುದು ಗೊತ್ತಾಗಿದೆ. ಬಾಲಕ ಹಾಸ್ಟೆಲ್‌ಗೆ ಕೂಡ ತೆಗೆದುಕೊಂಡು ಹೋಗಿದ್ದಾಗಿ ತಿಳಿದುಬಂದಿದೆ.

ಬೆಳಗ್ಗೆ ಕಟ್ ಮಾಡಿದ ತೆಂಗಿನಕಾಯಿ ಹೂ ಅನ್ನು ತಡವಾಗಿ ತಿಂದಿರಬಹುದು ಎಂದು ಪಂಚಾಯಿತಿ ಆರೋಗ್ಯ ಇಲಾಖೆ ತಿಳಿಸಿದೆ. ಇಂತಹ ಆಹಾರ ಪದಾರ್ಥಗಳು ಹಾಳಾಗಲು ತಾಪಮಾನ ಏರಿಕೆಯೇ ಕಾರಣ ಎನ್ನುತ್ತಾರೆ ಅಧಿಕಾರಿಗಳು.

- Advertisement -

Related news

error: Content is protected !!