Thursday, May 16, 2024
spot_imgspot_img
spot_imgspot_img

ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್‌ ಅಪಘಾತ… ತಪ್ಪಿದ ಅನಾಹುತ

- Advertisement -G L Acharya panikkar
- Advertisement -

ಕೆರಳದ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ ಅಪಘಾತವಾಗಿದ್ದು ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕೇರಳದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಮುಂಜಾನೆ 3.30 ರ ಸಮಯದಲ್ಲಿ ಹೆದ್ದಾರಿಯ ಅರಸು ಪುತ್ಥಳಿ ಬಳಿ ಪೊಲೀಸ್ ಇಲಾಖೆವತಿಯಿಂದ ನಿರ್ಮಿಸಿರುವ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಬಸ್ ಮುಂಬಾಗ ನಜ್ಜು ಗುಜ್ಜಾಗಿದೆ. ಬಸ್ ನಲ್ಲಿದ್ದ 6 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಜಾನೆ ದಟ್ಟ ಮಂಜು ಕವಿದಿತ್ತು. ಈ ವೇಳೆ ಹೆದ್ದಾರಿಯಲ್ಲಿ ವಾಹನವನ್ನು ಓವರ್ ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ಅರಸು ಪುತ್ಥಳಿಯ ಗ್ರಿಲ್ಸ್ ಗೆ ಡಿಕ್ಕಿ ಹೊಡೆದು ಎದುರಿನ ಸೂಚನಾ ಫಲಕಕ್ಕೆ ಅಳವಡಿಸಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಬಸ್ ನ ಮುಂಬಾಗಕ್ಕೆ ಹಾನಿಯಾಗಿದ್ದು. ಮುಂಜಾನೆ ವಾಹನ ದಟ್ಟಣೆ ಕಡಿಮೆ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬೆಳಗ್ಗೆ ಪೊಲೀಸರು ಅಪಘಾತಕ್ಕೀಡಾದ ಬಸ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ವಿಷಯ ತಿಳಿದು ಡಿವೈಎಸ್ ಪಿ ಗೋಪಾಲಕೃಷ್ಣ, ಇನ್ಸ್ ಪೆಕ್ಟರ್ ದೇವೇಂದ್ರ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!