Sunday, July 6, 2025
spot_imgspot_img
spot_imgspot_img

ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಆಟೋ ರಿಕ್ಷಾ; ಮಹಿಳೆ ಸಜೀವ ದಹನ

- Advertisement -
- Advertisement -
vtv vitla

ರಸ್ತೆ ವಿಭಜಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಬೆಂಕಿಗೆ ಆಹುತಿಯಾಗಿ ಮಹಿಳೆ ಸಜೀವ ದಹನಗೊಂಡ ಆಘಾತಕಾರಿ ಘಟನೆ ಮಹಾರಾಷ್ಟದ ಥಾಣೆಯಲ್ಲಿ ನಡೆದಿದೆ.

ಘೋಡ್ಬಂದರ್ ರಸ್ತೆಯ ಗೈಮುಖ್ ಪ್ರದೇಶದಲ್ಲಿ ಆಟೊದಲ್ಲಿ ಮಹಿಳೆ ಥಾಣೆ ನಗರದಿಂದ ಭಾಯಂದರ್ ಕಡೆಗೆ ಚಲಿಸುತ್ತಿದ್ದಾಗ ಆಟೋ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ ಮುಖ್ಯಸ್ಥ ಅವಿನಾಶ್ ಸಾವಂತ್ ತಿಳಿಸಿದರು.

ಈ ವೇಳೆ ಪ್ರಯಾಣಿಕ ಮಹಿಳೆ ವಾಹನದೊಳಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ. ಚಾಲಕ ರಾಜೇಶ್ ಕುಮಾರ್ (45) ಅವರು, ತೀವ್ರ ಸುಟ್ಟ ಗಾಯಗಳಾಗಿದ್ದು, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ಸುಟ್ಟು ಕರಕಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಆರ್ ಡಿಎಂಸಿ ಬೆಂಕಿಯನ್ನು ನಂದಿಸಿದರು.

ಮೃತ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!