Monday, June 8, 2026
spot_imgspot_img
spot_imgspot_img

ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ; ಶಾಮಿಯಾನ‌ ಅಂಗಡಿ ಸುಟ್ಟು ಕರಕಲು..!

- Advertisement -
- Advertisement -

ಮಂಡ್ಯ: ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ ಬಡಾವಣೆಯಲ್ಲಿ ನಡೆದಿದೆ.

ಪಟ್ಟಣದ ಉಮಾಶಂಕರ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ತಮ್ಮ ಶಾಮಿಯಾನದ ಅಂಗಡಿಯಲ್ಲಿ ಸ್ಕೂಟರ್ ಚಾರ್ಜ್ ಗೆ ಹಾಕಿದ್ದ ವೇಳೆ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಅಂಗಡಿ ಒಳಗಿನ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಪರಿಣಾಮ ಎಲೆಕ್ಟ್ರಿಲ್ ಸ್ಕೂಟರ್ ಮತ್ತು ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಕರಕಲಾಗಿದೆ.

ಸ್ಕೂಟರ್ ಭಸ್ಮಗೊಂಡು ಶಾಮಿಯಾನಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

- Advertisement -

Related news

error: Content is protected !!