Tuesday, July 1, 2025
spot_imgspot_img
spot_imgspot_img

ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆ ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತಪಡಿಸುತ್ತಿದೆ ವಿನೂತನ ಸ್ಪರ್ಧೆ

- Advertisement -
- Advertisement -

ಕುಣಿಯುವ ಮನಸುಗಳಿಗೆ ಸಜ್ಜಾಗಿದೆ ಏಕವ್ಯಕ್ತಿ ನೃತ್ಯಸ್ಪರ್ಧೆ ’ಗೆಜ್ಜೆನಾದ-2025’ ವೇದಿಕೆ. ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಲು 6 ದಿನಗಳಷ್ಟೇ ಬಾಕಿ

ವಿಟ್ಲ: ಕಳೆದ ಎರಡು ವರ್ಷಗಳಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆ ಪಡೆದ ಕಲಾತಪಸ್ವಿ ಸಾಂಸ್ಕೃತಿಕ ತಂಡವು ವಿನೂತನ ಶೈಲಿಯೊಂದಿಗೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾಂಸ್ಕೃತಿಕ ರಂಗದಲ್ಲಿ ವಿಭಿನ್ನತೆಯನ್ನು ಸಾರಲು ಮುಂದಾಗಿದೆ.

ಹಲವಾರು ವೇದಿಕೆಗಳಲ್ಲಿ ನೃತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಪ್ರಕಾರದ ಸಾಂಸ್ಕೃತಿಕ ವೈಭವಗಳನ್ನು ಪ್ರದರ್ಶಿಸಿ, ತನ್ನದೇ ವಿಶೇಷ ಶೈಲಿಯೊಂದಿಗೆ ಜನಮನ್ನಣೆ ಪಡೆದ ಕಲಾ ತಪಸ್ವಿ ತಂಡವು ಇದೀಗ ಹೊಸ ಸ್ಪರ್ಧೆಯೊಂದಿಗೆ ತಮ್ಮ ಮುಂದೆ ನಿಂತಿದೆ.

ಕುಣಿಯುವ ಮನಸ್ಸುಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಗೆಜ್ಜೆನಾದ-2025 ಎನ್ನುವ ಹೆಸರಿನಲ್ಲಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜ. 26 ನೇ ಆದಿತ್ಯವಾದ, ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಈ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯ ನಿಯಮಗಳು:

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಜನವರಿ 22- 2025ರ ಒಳಗೆ ಪ್ರವೇಶ ಶುಲ್ಕವನ್ನು (300₹) ನೀಡಿ ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು
*ಹೆಸರು ನೋಂದಾಯಿಸಿಕೊಳ್ಳುವ ಮೊದಲ 50 ಸ್ಪರ್ಧಿಗಳಿಗೆ ಮೊದಲ ಆದ್ಯತೆ
*’ಭಾರತದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಭಾರತೀಯ ನೃತ್ಯ ಪ್ರಕಾರಗಳಿಗೆ ಆದ್ಯತೆ ನೀಡಲಾಗುತ್ತದೆ.
“ಪ್ರದರ್ಶನವು 4+1 ನಿಮಿಷಗಳಿಗೆ ಸೀಮಿತವಾಗಿರುತ್ತದೆ. ಹಾಗೂ ವೇದಿಕೆಯಲ್ಲಿ ಸಿದ್ಧತೆಯನ್ನು ಮಾಡಲು ಹೆಚ್ಚುವರಿ 1 ನಿಮಿಷಗಳನ್ನು ನೀಡಲಾಗುತ್ತದೆ.
*ಯಾವುದೇ ರೀತಿಯ ಅಸಭ್ಯತೆ, ಅನುಚಿತ ಭಾಷೆ, ದೇವತೆಗಳು, ರಾಷ್ಟ್ರ, ಜಾತಿ ಅಥವಾ ಯಾವುದೇ ಸಮುದಾಯದ ಅವಹೇಳನಕಾರಿಯಾದ ವಿಷಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
*ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಸ್ಪರ್ಧಿಗಳು ಸ್ಪರ್ಧೆಗೆ 15 ನಿಮಿಷಗಳ ಮೊದಲು ಆಗಮಿಸಬೇಕಾಗುತ್ತದೆ. ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
*’ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಆಡಿಯೋ ಅಗತ್ಯಗಳಿಗಾಗಿ ಪೆನ್ ಡ್ರೈವ್‌ಗಳನ್ನು ಬಳಸಬೇಕಾಗುತ್ತದೆ. ಯಾವುದೇ ರೀತಿಯ ತಾಂತ್ರಿಕ ದೋಷಗಳು ಉಂಟಾದಲ್ಲಿ ಸಂಘಟಕರು ಜವಾಬ್ದಾರರಾಗಿರುವುದಿಲ್ಲ.
*ಅಗತ್ಯ ಧ್ವನಿ ಮತ್ತು ಬೆಳಕಿನ ಸಾಧನಗಳನ್ನು ಒದಗಿಸಲಾಗುತ್ತದೆ.
*ಅನುಚಿತ ವರ್ತನೆಯನ್ನು ಪ್ರದರ್ಶಿಸುವ ಸ್ಪರ್ಧಿಗಳು ಅನರ್ಹತೆಯನ್ನು ಎದುರಿಸಬೇಕಾಗುತ್ತದೆ.
*ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು.
*ಪ್ರವೇಶ ಶುಲ್ಕವನ್ನು ನೀಡಿ ಸ್ಪರ್ಧಿಗಳು ಸ್ಪರ್ಧೆಗೆ ಭಾಗವಹಿಸದೆ ಇದ್ದಲ್ಲಿ ಯಾವುದೇ ಕಾರಣಕ್ಕೂ ಪ್ರವೇಶ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
*ತೀರ್ಪುಗಾರರ ನಿರ್ಧಾರಗಳೇ ಅಂತಿವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7090615880, 7090886965
ನಿಯಮಗಳು ಮತ್ತು ನಿಬಂಧನೆಗಳು

- Advertisement -

Related news

error: Content is protected !!