Monday, April 29, 2024
spot_imgspot_img
spot_imgspot_img

ವಾಟ್ಸ್​​ಆ್ಯಪ್‌ಗೆ ಬಂದ ನಗ್ನ ಕರೆಯಿಂದ 12 ಲಕ್ಷ ಕಳೆದುಕೊಂಡ ವೃದ್ಧ..!

- Advertisement -G L Acharya panikkar
- Advertisement -

ಮಹಿಳೆ ಒಬ್ಬರಿಗೆ ಅಶ್ಲೀಲ ವಿಡಿಯೋ ಕಾಲ್ ಮಾಡಿದ್ದ ಸ್ಕ್ರೀನ್​ಶಾಟ್ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡುವುದಾಗಿ ಬೆದರಿಸಿ ವೃದ್ಧನಿಂದ ಬರೋಬ್ಬರಿ 12.8 ಲಕ್ಷ ರೂಪಾಯಿ ಹಣವನ್ನು ದೋಚಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಬರ್ಖತ್ ಖಾನ್ (32), ರಿಜ್ವಾನ್ (22) ಬಂಧಿತ ಆರೋಪಿಗಳು. ಖದೀಮರು ಸೈಬರ್​​ ಸೆಲ್ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದಾರೆ. ಕಳೆದ ಜುಲೈ 18 ರಂದು ಸಂತ್ರಸ್ತನಿಗೆ ವಾಟ್ಸ್​ಆ್ಯಪ್ ವಿಡಿಯೋ ಕಾಲ್ ಒಂದು ಬಂದಿತ್ತು. ವಿಡಿಯೋ ಕಾಲ್​ನಲ್ಲಿ ಮಹಿಳೆಯೊಬ್ಬರು ಬೆತ್ತಲೆಯಾಗಿ ಕೂತಿದ್ದಳು. ಸಂತ್ರಸ್ತ ವ್ಯಕ್ತಿಗೆ ವಿಡಿಯೋ ಕಾಲ್​ನಲ್ಲಿ ಏನಾಗುತ್ತಿದೆ ಅನ್ನುವಷ್ಟರಲ್ಲಿ ಮಹಿಳೆಯ ಕಡೆಯಿಂದ ಸ್ಕ್ರೀನ್​ಶಾಟ್​ಗಳನ್ನು ತೆಗೆದುಕೊಂಡಿದ್ದರು.

ಅದಾದ ಬಳಿಕ ವಿವಿಧ ಮೊಬೈಲ್​​ ನಂಬರ್​​ಗಳಿಂದ ಆ ವೃದ್ಧನಿಗೆ ಕರೆಗಳು ಬರಲು ಶುರುವಾಗಿದ್ದವು. ನಿಮ್ಮ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು ನಮ್ಮ ಬಳಿಯಿವೆ. ನೀವು ನಾವು ಕೇಳಿದ ಹಣವನ್ನು ನೀಡಿ, ಇಲ್ಲದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಸಂತ್ರಸ್ತ ವೃದ್ಧ ಹಣ ನೀಡಲು ಒಪ್ಪದಿದ್ದಾಗ ಮಹಿಳೆ ಸತ್ತಿದ್ದಾಳೆ ಎಂದು ಬೆದರಿಸಿದ್ದಾರೆ. ಜೊತೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವ ಫೋಟೋ ಒಂದನ್ನ ಕಳುಹಿಸಿದ್ದರು ಎನ್ನಲಾಗಿದೆ. ಇದರಿಂದ ಗಾಬರಿಯಾದ ವೃದ್ಧ 12,80,000 ರೂಪಾಯಿ ಹಣವನ್ನು ಬ್ಯಾಂಕ್ ಅಕೌಂಟ್​​ಗೆ ಹಾಕಿದ್ದ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಖಾನ್, ಅಲ್ವರ್​ ಎಂಬುವವರನ್ನು ಬಂಧಿಸಲಾಗಿದೆ. ಮೂರು ಮೊಬೈಲ್ ಫೋನ್ ಹಲವು ಸಿಮ್ ಕಾರ್ಡ್​​ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯನ್ನು ಮುಂದುವರಿಸಿದ್ದೇವೆ. ಇದೇ ರೀತಿ ಅನೇಕ ಜನರಿಗೆ ಮೋಸ ಮಾಡಿರೋದು ತನಿಖೆಯಿಂದ ಬಯಲಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ರೋಹಿತ್ ಮೀನಾ ತಿಳಿಸಿದ್ದಾರೆ.

- Advertisement -

Related news

error: Content is protected !!