Monday, April 29, 2024
spot_imgspot_img
spot_imgspot_img

ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ – ನಾಲ್ವರು ಸ್ಥಳದಲ್ಲೇ ಸಾವು

- Advertisement -G L Acharya panikkar
- Advertisement -
vtv vitla

ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಅಪರಿಚಿತ ವಾಹನ ಹರಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಡರಾತ್ರಿ ವಿಜಯಪುರ ನಗರದ ಹೊರಭಾಗದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್ ಬೈಲೈನ್ ಬಳಿ ದುರ್ಘಟನೆ ನಡೆದಿದೆ.

ಟ್ರಕ್ ಬೈಲ್ ಬಳಿಯ ಸರ್ವಿಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನ ಹರಿದು ಪರಾರಿಯಾಗಿದೆ.

ಘಟನೆಯಲ್ಲಿ ಶಿವಾನಂದ ಚೌಧರಿ (25), ಸುನೀಲ್ ಖಾನಾಪೂರ (26), ಈರಣ್ಣ ಕೋಲಾರ (26) ಹಾಗೂ ಪ್ರವೀಣ್ ಪಾಟೀಲ್ (30) ಮೃತಪಟ್ಟಿದ್ದಾರೆ. ಮೃತರೆಲ್ಲರೂ ವಿಜಯಪುರ ನಗರದ ವಜ್ರ ಹನುಮಾನ್ ನಗರದ ವಾಸಿಗಳು. ಅಪರಿಚಿತ ವಾಹನ ನಾಲ್ವರ ಮೇಲಲ್ಲದೇ ಅವರ ಬೈಕ್‌ಗಳ ಮೇಲೂ ಹರಿದಿದೆ. ಇದರಿಂದ 2 ಬೈಕ್‌ಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!