Sunday, June 7, 2026
spot_imgspot_img
spot_imgspot_img

ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿಯನ್ನು ಕೊಂದು ತಾನೂ ಆತ್ಮಹತ್ಯೆ

- Advertisement -
- Advertisement -

ಕೊಪ್ಪಳ: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಹುಡುಗಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಹುಡುಗಿಯನ್ನು ಕೊಂದ ಬಳಿಕ ಯುವಕ ತಾನೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಮೃತ ಹುಡುಗಿ ಸುಮಾ ತೋಟದ (17) ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಗ್ರಾಮದ ಮೃತ ಯುವಕ ಪ್ರಕಾಶ್ ಭಜಂತ್ರಿ ಪಿಯುಸಿ ಮುಗಿಸಿ ಐಟಿಐ ಓದುತ್ತಿದ್ದ. ಸುಮಾಳನ್ನ ಪ್ರೀತಿಸುವಂತೆ ಒತ್ತಾಯ ಮಾಡ್ತಿದ್ದ. ಆದ್ರೆ ಸುಮಾ ಪ್ರೀತಿ ನಿರಾಕರಿಸಿದ್ದಳು.

ಸುಮಾ ಕೊಲೆಯಾಗೋದಕ್ಕೂ ಮುನ್ನ ಪ್ರಕಾಶ್ ಚಾಕು ಹಿಡಿದುಕೊಂಡು ಆಕೆ ಮನೆಗೆ ಹೋಗೋದನ್ನ ಸ್ಥಳೀಯರು ನೋಡಿದ್ದಾರೆ. ಸದ್ಯ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

- Advertisement -

Related news

error: Content is protected !!