- Advertisement -
- Advertisement -
ಕಡಪ: ಪಾಗಲ್ ಪ್ರೇಮಿಯೊಬ್ಬ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಡವೇಲು ವಲಯದಲ್ಲಿ ನಡೆದಿದೆ.

ಬ್ಯಾಡ್ ವೆಲ್ ವೀರರೆಡ್ಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಸಿರಿಷಾ (18) ಎಂಬುವವಳನ್ನು ಚರಣ್ ಎಂಬಾತ ಸದಾ ಹಿಂಬಾಲಿಸಿ ಪ್ರೀತಿ ಮಾಡುವಂತೆ ಒತ್ತಾಯಿಸಿದ್ದ ಆಕೆ ಪ್ರೀತಿಯನ್ನು ತಿರಸ್ಕರಿಸಿದಳು. ಕೋಪಗೊಂಡ ಚರಣ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಯುವತಿಯು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ

ಗ್ರಾಮಸ್ಥರು ಆರೋಪಿ ಚರಣ್ ನನ್ನು ಮರಕ್ಕೆ ಕಟ್ಟಿ ಚೆನ್ನಾಗಿ ಥಳಿಸಿದ್ದಾರೆ. ಆತ ಮೂರ್ಛೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.



- Advertisement -