Wednesday, June 17, 2026
spot_imgspot_img
spot_imgspot_img

ವಿಟ್ಲ: ಹಾರಿ ಹೋದ ಅಂಗನವಾಡಿ ಕೇಂದ್ರದ ಮಹಡಿಯ ಸಿಮೆಂಟ್ ಶೀಟ್: ಇನ್ನೂ ದುರಸ್ತಿ ಮಾಡದ ಕಾರಣ ಸಮಸ್ಯೆಯಲ್ಲಿ ವಿದ್ಯಾರ್ಥಿಗಳು

- Advertisement -
- Advertisement -

ವಿಟ್ಲ: ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ಎಂಬಲ್ಲಿರುವ ಅಂಗನವಾಡಿ ಕೇಂದ್ರದ ಮಹಡಿಯ ಸಿಮೆಂಟ್ ಶೀಟ್ ಹಾರಿ ಹೋಗಿ ಹಲವು ದಿನ ಕಳೆದರೂ ದುರಸ್ತಿ ಕಾರ್ಯ ನಡೆದಿಲ್ಲ ಎಂದು ಮಕ್ಕಳ ಹೆತ್ತವರು ದೂರಿದ್ದಾರೆ.

ಮೇಗಿನಪೇಟೆ ಅಂಗನವಾಡಿ ಕೇಂದ್ರದ ಮುಂಭಾಗಕ್ಕೆ ಮಕ್ಕಳಿಗೆ ಊಟ ಮಾಡಲು ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಶೀಟ್ ಹಾಕಿ ನಿರ್ಮಾಣ ಮಾಡಲಾಗಿತ್ತು. ಮೇ ತಿಂಗಳಿನಲ್ಲಿ ಭಾರೀ ಗಾಳಿ ಮಳೆಗೆ ಸಿಮೆಂಟ್ ಶೀಟ್ ಹಾರಿ ಹೋಗಿತ್ತು. ಇದರಿಂದ ಮಳೆಗಾಲದಲ್ಲಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದುರಸ್ತಿ ಮಾಡಲು ಯಾರೂ ಕೂಡಾ ಮುಂದೆ ಬರುತ್ತಿಲ್ಲ ಎಂಬುದು ಪೋಷಕರ ಆರೋಪವಾಗಿದೆ.

- Advertisement -

Related news

error: Content is protected !!