Tuesday, July 21, 2026
spot_imgspot_img
spot_imgspot_img

ಅಕ್ರಮ ಹಣ ವರ್ಗಾವಣೆ : ಅನಿಲ್ ಅಂಬಾನಿಗೆ & ಟೀನಾ ಅಂಬಾನಿಗೆ ಈಡಿ ಸಮನ್ಸ್

- Advertisement -
- Advertisement -

ಹೊಸದಿಲ್ಲಿ : ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಹಾಗೂ ಅವರ ಪತ್ನಿ ಟೀನಾ ಅಂಬಾನಿಗೆ ಜಾರಿ ನಿರ್ದೇಶನಾಲಯ ಹೊಸ ಸಮನ್ಸ್ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

68 ವರ್ಷದ ಮಾಜಿ ನಟಿ ಟೀನಾ ಅಂಬಾನಿ ಅವರಿಗೆ ಇಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು. ಆದರೆ ಅವರು ಹಾಜರಾಗಲಿಲ್ಲ.

ಈಗ ಫೆಬ್ರವರಿ 17ರಂದು ಹಾಜರಾಗುವಂತೆ ಟೀನಾ ಅಂಬಾನಿ ಅವರಿಗೆ ಹಾಗೂ ಫೆಬ್ರವರಿ 18ರಂದು ಹಾಜರಾಗುವಂತೆ 66 ವರ್ಷದ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ.

ಅವರು ವಿಚಾರಣೆಗೆ ಹಾಜರಾದಾಗ ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!