Friday, May 3, 2024
spot_imgspot_img
spot_imgspot_img

ಕಾಸರಗೋಡು: ಬಾಡಿಗೆ ಮನೆಯಲ್ಲಿ ಚಾಲ್ತಿಯಲ್ಲಿರದ ಏಳು ಕೋಟಿ ರೂ. ನೋಟು ಪತ್ತೆ

- Advertisement -G L Acharya panikkar
- Advertisement -

ಕಾಸರಗೋಡು: ಚಾಲ್ತಿಯಲ್ಲಿರದ ಎರಡು ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನುಅಂಬಲತ್ತರದ ಪರಪಳ್ಳಿ ಗುರುಪುರಂನ ಬಾಡಿಗೆ ಮನೆಯಲ್ಲಿ ಬರೋಬ್ಬರಿ 7.25 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಂಬಲತ್ತರ ಪೊಲೀಸರು ಬುಧವಾರ ಸಂಜೆ ನಡೆಸಿದ ದಾಳಿ ವೇಳೆ ನೋಟುಗಳು ಪತ್ತೆಯಾಗಿವೆ.

ಪಾಣತ್ತೂರು ಪಾಣತ್ತಡಿಯ ಅಬ್ದುಲ್ ರಝಾಕ್ ಎಂಬುವರು ಈ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಪೊಲೀಸರು ಆತನನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಸ್ವಿಚ್ ಆಫ್ ಆಗಿತ್ತು. ಎರಡು ದಿನಗಳಿಂದ ಆತ ಮನೆಗೆ ಬಂದಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ನಂತರ ಪೊಲೀಸರು ಮನೆ ತೆರೆದು ಶೋಧ ನಡೆಸಿದಾಗ ನೋಟುಗಳು ಗೋಣಿಚೀಲದಲ್ಲಿದ್ದುದು ಪತ್ತೆಯಾಗಿದೆ, ಆರೋಪಿಗೆ ಬಲೆ ಬೀಸಿದ್ದಾರೆ‌.

- Advertisement -

Related news

error: Content is protected !!